ಪ್ರಶ್ನೆ 46. ಗುರುದೇವ, ಜನರು ಬದಲಾವಣೆಯನ್ನು ಏಕೆ ವಿರೋಧಿಸುತ್ತಾರೆ?

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅಮೂಲ್ಯವಾದದ್ದು ಏನ್ನನ್ನೋ ಕಳೆದುಕೊಳ್ಳುತ್ತೇವೆ ಇಲ್ಲ ಬದಲಾವಣೆಯಿಂದ ಯಾವುದಾದರೂ ವಿಪತ್ತು ಬರಬಹುದೆಂಬ ಭಯದಿಂದ ಜನರು ಬದಲಾವಣೆಯನ್ನು ವಿರೋಧಿಸುತ್ತಾರೆ. ಆದರೆ ಬದಲಾವಣೆಯು ಅವರನ್ನು ಉತ್ತಮಗೊಳಿಸುತ್ತದೆ ಎಂದು ನೀವು ಅವರಿಗೆ ತಿಳಿಸಿದರೆ, ಅವರು ಅದನ್ನು ಖಂಡಿತವಾಗಿ ಸ್ವೀಕರಿಸುತ್ತಾರೆ. ಜೀವನದಲ್ಲಿ ಮೇಲೆ ಏರುವುದನ್ನು ಯಾರೂ ಇಷ್ಟಪಡದೇ ಇರುವುದಿಲ್ಲ. ಜನರು ಹೆಚ್ಚು ಸಂತೋಷವಾಗಿರುವುದನ್ನು, ಹೆಚ್ಚು ಧನಾತ್ಮಕವಾಗಿರುವುದನ್ನು ಯಾವಾಗಲೂ ಬಯಸುತ್ತಾರೆ. 

ನಾವು ಮಾಡಬೇಕಾಗಿರುವುದೆಲ್ಲ ಅವರೊಂದಿಗೆ ಸರಿಯಾದ ರೀತಿಯಲ್ಲಿ ಮಾತನಾಡುವುದು ಮತ್ತು ಬದಲಾವಣೆಯು ಹೇಗೆ ಜೀವನವನ್ನು ಉತ್ತಮಗೊಳಿಸುತ್ತದೆ ಎಂದು ವಿವರಿಸುವುದು. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ರಾತ್ರೋರಾತ್ರಿ ಬದಲಾವಣೆ ಆಗಲು ಸಾಧ್ಯವಿಲ್ಲ, ಸ್ವಲ್ಪ ಮನವೊಲಿಸುವಿಕೆಯೊಂದಿಗೆ ಅದು ಖಂಡಿತ ಸಂಭವಿಸುತ್ತದೆ.


ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:

1. How To Keep Faith During Difficult Times In Life? - CLICK HERE TO READ

2. How to be free from the storm of emotions? - CLICK HERE TO READ

3. The Nature of the Mind - CLICK HERE TO READ


ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು