ಪ್ರಶ್ನೆ 44: ಗುರುದೇವ, ನಮ್ಮಲ್ಲಿ ಅನೇಕ ಚಿಕ್ಕ ಮಕ್ಕಳು, ಅರಿವನ್ನು ಹೆಚ್ಚಿಸಿಕೊಂಡು ಜಾಗೃತವಾಗಿದ್ದಾರೆ ಹಾಗೂ ಇಲ್ಲಿ ಮುಖ್ಯವಾದ ಕೆಲಸಕ್ಕಾಗಿ ಬಂದಿದ್ದಾರೆ ಎಂಬುದನ್ನು ಅರಿತಿದ್ದಾರೆ. ಈ ಪ್ರತಿಭಾನ್ವಿತ ಮಕ್ಕಳನ್ನು ನಾವು ಹೇಗೆ ಉತ್ತೇಜಿಸಬಹುದು?

ಗುರುದೇವ್ ಶ್ರೀ ಶ್ರೀ ರವಿಶಂಕರ್:

ಹೌದು. ಆಶ್ರಮವೇ ನನ್ನ ನಿಜವಾದ ಮನೆ. ನನ್ನ ನಿಜವಾದ ಕುಟುಂಬ ಆಶ್ರಮದಲ್ಲಿದೆ ಎಂದು ಪೋಷಕರಿಗೆ ಹೇಳುವ ಅನೇಕ ಮಕ್ಕಳು ಇದ್ದಾರೆ. ಅನೇಕ ಮಕ್ಕಳು ಪ್ರಪಂಚದಾದ್ಯಂತ ಈ ರೀತಿಯ ವಿಷಯಗಳನ್ನು ಹೇಳುತ್ತಿದ್ದಾರೆ; ಅನೇಕ ಮಕ್ಕಳು ಆಗಲೇ ಸಸ್ಯಾಹಾರಿಗಳಾಗಿದ್ದಾರೆ, ಅಲ್ಲವೇ? ನಿಮ್ಮಲ್ಲಿ ಎಷ್ಟು ಮಂದಿ ಅದನ್ನು ನೋಡಿದ್ದೀರಿ? ಅನೇಕ ಮಕ್ಕಳು ಜಪಿಸುವುದನ್ನು ಪ್ರೀತಿಸುತ್ತಿದ್ದಾರೆ.


ನಿನ್ನೆ, ನಾವು ಭಾರತದ ಸುದ್ದಿವಾಹಿನಿಯಲ್ಲಿ ಭೂತಾನ್ ರಾಜಮನೆತನಕ್ಕೆ ಒಂದು ಮಗು ಜನಿಸಿದ ಬಗ್ಗೆ ಕಂಡೆವು. ಆ ಮಗುವು “ನಾನು 828 ವರ್ಷಗಳ ನಂತರ ಇಲ್ಲಿಗೆ ಬಂದಿದ್ದೇನೆ; ನಾನು ನಳಂದ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದೆ ಮತ್ತು ಶಿಕ್ಷಕನಾಗಿದ್ದೆ , ನನ್ನನ್ನು ಅಲ್ಲಿಗೆ ಕರೆದೊಯ್ಯಿರಿ” ಎಂದು ಹೇಳಿದೆ. ಆದ್ದರಿಂದ ಅವರು ಮಗುವನ್ನು ಭೂತಾನ್‌ನಿಂದ ಭಾರತದ ಬಿಹಾರಕ್ಕೆ ಕರೆದು ತಂದರು. ಮಗು ನಿಲುವಂಗಿಯನ್ನು ಧರಿಸಿ, ಸನ್ಯಾಸಿಯಂತೆ ಕಾಣುತ್ತಿದ್ದ; ತಾನು ಎಲ್ಲಿ ಕುಳಿತುಕೊಳ್ಳುತ್ತಿದ್ದದ್ದು, ಅಲ್ಲಿ ಏನು ಇತ್ತು ಮತ್ತು ಸುತ್ತಮುತ್ತಲಿನ ಎಲ್ಲವನ್ನೂ ಅವನು ಜ್ಞಾಪಿಸಿಕೊಂಡನು.


ಇದೇ ರೀತಿಯ ಬಹಳ ಘಟನೆಗಳು ಆರ್ಟ್ ಆಫ್  ಲಿವಿಂಗ್ ನಲ್ಲಿ ನಡೆದಿದೆ . ಆರ್ಟ್ ಆಫ್ ಲಿವಿಂಗ್‌ನ ಒಂದು ಮಗು ಇತ್ತೀಚೆಗೆ, “ನಾನು ಹಿಮಾಲಯದಲ್ಲಿ ಋಷಿಯಾಗಿದ್ದೆ , ಈಗ ನಾನು ಬಂದಿದ್ದೇನೆ” ಎಂದು ಹೇಳಿದ . ಅವನು ಒಂದೂವರೆ ವರ್ಷದ ಮಗು; ನಮ್ಮ ಹೆಸರನ್ನು "ಗುರುದೇವ್" ಎಂದು ಸ್ಪಷ್ಟವಾಗಿ ಕರೆಯುತ್ತಾನೆ. ರುದ್ರಾಕ್ಷ ಮಾಲವನ್ನು ತೆಗೆದುಕೊಂಡು, ಅದನ್ನು ವರ್ತುಲವಾಗಿ ಇರಿಸಿ, “ಇದು ರುದ್ರಾಕ್ಷ ಮಾಲೆ!”ಎಂದು ಹೇಳುತ್ತಾನೆ. 


ಇದೇ ರೀತಿಯ ಮಕ್ಕಳು ಬಹಳಷ್ಟು ಇದ್ದಾರೆ. ಈ ರೀತಿಯ  ಬಹಳ ಘಟನೆಗಳು ರಷ್ಯಾ ಮತ್ತು ಮಂಗೋಲಿಯಾಗಳಲ್ಲಿ ನಡೆಯುವುದು ನಿಮಗೆ ಕಾಣಸಿಗುತ್ತದೆ.


ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:

1. Know that you are needed, you are useful - CLICK HERE TO READ

2. Divine really loves you! - CLICK HERE TO READ

3. A proven trick to deal with a disturbed mind - CLICK HERE TO READ



ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:



ಕಾಮೆಂಟ್‌ಗಳು