ನಾವು ನಿಮಗೆ ಹೇಳುವುದು ಏನೆಂದರೆ, ಯಾರಾದರೂ ನಿಮ್ಮನ್ನು ಅವಮಾನಿಸಿದರೆ ಇಲ್ಲ ಟೀಕಿಸಿದರೆ, ಅದಕ್ಕೆ ಅಷ್ಟು ಮಹತ್ವ ಕೊಡಬೇಡಿ. ಅವರು ಎಷ್ಟು ಹಾನಿ ಮಾಡಬಹುದು? ಅವರ ಪಾಡಿಗೆ ಅವರು ಅದನ್ನು ಮಾಡಲು ಬಿಡಿ! ಮುಂದಿನ ಬಾರಿ ಅವರು ಮತ್ತೆ ಅದನ್ನೇ ಮಾಡಿದಾಗ ಅವರಿಗೆ ಹೇಳಿ - “ನಿಮಗೆ ಬೇಕಾದಷ್ಟು ನೀವು ನನ್ನನ್ನು ಅವಮಾನಿಸಬಹುದು. ನೀವು ನನ್ನನ್ನು ಎಷ್ಟೇ ಟೀಕಿಸಿದರು ನಾನು ಬದಲಾಗುವುದಿಲ್ಲ” ಎಂದು. ಅವರನ್ನು ಧೈರ್ಯದಿಂದ ಎದುರಿಸಿ. ಟೀಕೆ ಇಲ್ಲ ಅವಮಾನದಿಂದ ಹೆದರಿ ಪರಿಸ್ಥಿತಿಯನ್ನು ಬಿಟ್ಟು ಓಡಿಹೋಗಬೇಡಿ. ದೃಡವಾಗಿರಿ ಮತ್ತು ಅವರ ಮುಂದೆ ಎದೆಯುಬ್ಬಿಸಿ ನಿಲ್ಲಿ. ಅವರಿಗೆ ಎಷ್ಟು ಸಾಧ್ಯವೋ ಅಷ್ಟು ಅವರು ಅವಮಾನಿಸಲಿ.
ನೋಡಿ, ಅವಮಾನಕ್ಕೆ ನೀವು ಕಿರುನಗೆಯಿಂದ ಮಾತ್ರ ಪ್ರತಿಕ್ರಿಯಿಸಬೇಕು. ಯಾವುದೇ ಅವಮಾನ ಅಥವಾ ಟೀಕೆಗಳಿಗೆ, ಅಲುಗಾಡಿಸಲಾಗದ ನಗುವಿನೊಂದಿಗೆ ಪ್ರತಿಕ್ರಿಯಿಸವ ವ್ಯಕ್ತಿಗೆ ಮಾತ್ರ ನಿಜವಾದ ತಾಳ್ಮೆ ಮತ್ತು ಧೈರ್ಯವಿದೆ ಎಂದು ತಿಳಿಯಬಹುದು. ಗುಂಡಿನ ಕಾಳಗಕ್ಕೆ ಹೂಗುಚ್ಚಗಳೊಂದಿಗೆ ಪ್ರತಿಕ್ರಿಯಿಸುವವನು ಮಾತ್ರ ನಿಜವಾದ ಸಂತ. ಬುದ್ಧಿವಂತ ವ್ಯಕ್ತಿಯು, ನಿಂದನೆ ಮತ್ತು ಟೀಕೆಗಳಿಗೆ ಹಾಸ್ಯದಿಂದ ಪ್ರತಿಕ್ರಿಯಿಸಬಲ್ಲವನಾಗಿರುತ್ತಾನೆ. ನಿಮ್ಮ ಬಗ್ಗೆ ಕಾಮೆಂಟ್ ಮಾಡುವ ಅಥವಾ ನಿಮ್ಮನ್ನು ಕೆಣಕುವ ವ್ಯಕ್ತಿಯ ಮೇಲೆ ನೀವು ಕೋಪಗೊಂಡರೆ, ಅದು ಬುದ್ಧಿವಂತಿಕೆಯ ಲಕ್ಷಣವಲ್ಲ. ಅಹಿತಕರ ಪರಿಸ್ಥಿತಿಯನ್ನು ಆಹ್ಲಾದಕರವಾಗಿ ಪರಿವರ್ತಿಸುವುದು ಬುದ್ಧಿವಂತಿಕೆಯ ಸಂಕೇತವಾಗಿದೆ. ಬುದ್ಧಿವಂತರು ಅದನ್ನೇ ಮಾಡುತ್ತಾರೆ. ಅಹಿತಕರ ಅಥವಾ ಪ್ರತಿಕೂಲವಾದ ಸಂದರ್ಭಗಳಲ್ಲಿಯೂ ಸಹ ಆಹ್ಲಾದತೆಯನ್ನು ಕಾಣುವವನು ನಿಜವಾಗಿಯೂ ಬುದ್ಧಿವಂತ ವ್ಯಕ್ತಿ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. The mystery behind friends, enemies and karma - CLICK HERE TO READ
2. Mysterious ways of Karma - CLICK HERE TO READ
3. How to handle criticism? - CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು