ಪ್ರಶ್ನೆ 42. ಗುರುದೇವ, ಜೀವನದಲ್ಲಿ ತೃಪ್ತಿಯನ್ನು ತರುವುದು ಯಾವುದು? ನಾನು ಏನೇ ಮಾಡಿದರೂ ಸ್ವಲ್ಪ ಸಮಯದ ನಂತರ ಅಂತಿಮವಾಗಿ ಹೆಚ್ಚಿನ ಸಂತೋಷ ಮತ್ತು ಸಂತೃಪ್ತಿಯನ್ನು ತರುವುದಿಲ್ಲ.
ಏನನ್ನಾದರೂ ಮಾಡುವ ಮೂಲಕ ತೃಪ್ತಿಯನ್ನು ಪಡೆಯುವ ಕಲ್ಪನೆಯೇ ಸರಿಯಲ್ಲ. ತೃಪ್ತಿ ಆಳವಾದ ವಿಶ್ರಾಂತಿಯಿಂದ ಬರುತ್ತದೆ, ತನ್ನೊಳಗೆ ಆಳವಾಗಿ ವಿಶ್ರಾಂತಿ ಪಡೆಯುವ ಮೂಲಕ. ನಿಮ್ಮ ಆತ್ಮದೊಳಗೆ ನೀವು ಸ್ಥಾಪಿತವಾದಾಗ, ತೃಪ್ತಿ ಇರುತ್ತದೆ. ಯಾವುದೇ ಕೆಲಸವನ್ನು ಮಾಡುವುದರ ಮೂಲಕ ಸಿಗುವ ತೃಪ್ತಿ ತಾತ್ಕಾಲಿಕವಾಗಿರುತ್ತದೆ.
ನಿಮ್ಮ ಕೆಲಸ ಯಶಸ್ವಿಯಾದರೆ, ಇನ್ನೂ ಹೆಚ್ಚಿನ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ನೀವು ಭಾವಿಸುತ್ತೀರಿ. ನೀವು ಹೆಚ್ಚು ಯಶಸ್ಸನ್ನು ಪಡೆದಾಗ, ಅದು ಮತ್ತೆ ಹೆಚ್ಚು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಒಂದು ಯಶಸ್ಸಿನ ನಂತರ ಇನ್ನು ಸಾಕು ಎಂದು ನಿಲ್ಲಿಸಬೇಕೆಂದು ನಿಮಗೆ ಅನಿಸುವುದಿಲ್ಲ. ಹಾಗೇ ಮತ್ತೊಂದೆಡೆ, ನೀವು ಮಾಡುತ್ತಿರುವ ಕೆಲಸದಲ್ಲಿ ಸ್ವಲ್ಪ ನಷ್ಟ ಅಥವಾ ವೈಫಲ್ಯವನ್ನು ಎದುರಿಸಿದರೆ, “ನನ್ನ ಪ್ರಯತ್ನಗಳ ಹೊರತಾಗಿಯೂ ಅದು ಹೇಗೆ ವಿಫಲವಾಯಿತು? ನಾನು ಇಲ್ಲಿಗೆ ಬಿಡುವುದಿಲ್ಲ; ಮತ್ತೆ ಪ್ರಯತ್ನಿಸುತ್ತೇನೆ ಮತ್ತು ಯಶಸ್ವಿಯಾಗುತ್ತೇನೆ”ಎಂದು ಯೋಚಿಸಿ ಇನ್ನೂ ಹೆಚ್ಚಿನದನ್ನು ಮಾಡುವ ಸವಾಲನ್ನು ಸ್ವೀಕರಿಸುತ್ತೀರಿ. ಆದ್ದರಿಂದ ಯಶಸ್ಸು ಅಥವಾ ವೈಫಲ್ಯ, ಯಾವುದೇ ಆದರೂ ಇನ್ನಷ್ಟು ಕೆಲಸವನ್ನು ಮಾಡಲು ಶ್ರಮಿಸಬೇಕಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಸಂತೃಪ್ತಿಯ ಹುಡುಕಾಟ ಮುಂದುವರಿಯುತ್ತಲೇ ಇರುತ್ತದೆ.
ನಿರಂತರವಾಗಿ ಕೆಲಸದಲ್ಲಿ ತೊಡಗಿರುವಾಗ ನೀವು ಸಂತೃಪ್ತಿಯನ್ನು ಹುಡುಕುತ್ತಲೇ ಇರುತ್ತೀರಿ. ಜ್ಞಾನದಲ್ಲಿ ಮಾತ್ರ ನೀವು ನಿಜವಾದ ತೃಪ್ತಿಯನ್ನು ಕಾಣಬಹುದು. ಹಾಗಾಗಿ ಪೂರ್ಣತೆ ಅಥವಾ ಸಂತೃಪ್ತಿ ಇರುವುದು ಜ್ಞಾನದಲ್ಲಿ ಹಾಗೂ ಆಳವಾದ ಧ್ಯಾನದಲ್ಲಿ ಮಾತ್ರ, ಯಾವುದೇ ಕೆಲಸ ಅಥವಾ ಕ್ರಿಯೆಯಲ್ಲಿ ಅಲ್ಲ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. 7 Ways to Achieve Inner Peace and Prosperity - CLICK HERE TO READ
2. When will you be Happy - CLICK HERE TO READ
3. How can I get more happiness and joy from everywhere? - CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು