ಪ್ರಶ್ನೆ 41. ಸ್ವಾಭಾವಿಕತೆ ಮತ್ತು ಹಠಾತ್ ಪ್ರವೃತ್ತಿಯ ಬಗ್ಗೆ ನಿಮ್ಮ ಟ್ವೀಟ್ ನನಗೆ ತುಂಬಾ ಇಷ್ಟವಾಯಿತು. ನೀವು ‘ನಾನೆ ಸರಿ’ ಎಂದು ಪರಿಗಣಿಸುವುದರ ಮತ್ತು 'ಸರಿಯಾಗಿರುವಿಕೆಯ' ಬಗ್ಗೆಯೂ ಮಾತನಾಡಬಹುದೇ?
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಟ್ವೀಟ್:
“ಸಹಜವಾಗಿ ನಾವು ಸ್ವಾಭಾವಿಕತೆಯನ್ನು ಹಠಾತ್ ಪ್ರವೃತ್ತಿಯ ಜೊತೆಗೆ ಹೋಲಿಸಿ ಗೊಂದಲಗೊಳಗಾಗುತ್ತೇವೆ. ಮೊದಲನೆಯದು ಯಶಸ್ಸಿನ ರಹಸ್ಯವಾದರೆ, ಎರಡನೆಯದು ವಿಪತ್ತುಗಳಿಗೆ ಕಾರಣವಾಗಿದೆ. ಸ್ವಾಭಾವಿಕತೆಯು ಸ್ಪಷ್ಟತೆ, ಅಂತಃಪ್ರಜ್ಞೆ ಮತ್ತು ಯೋಚಸಿ ಪ್ರತಿಕ್ರಿಯಿಸುವುದರಿಂದ ಉದ್ಭವಿಸುತ್ತದೆ, ಹಠಾತ್ ಪ್ರವೃತ್ತಿ ಕೇವಲ ಭಾವನೆಗಳು ಮತ್ತು ಅದರ ಸ್ಪಂದನೆಯಿಂದ ಉಂಟಾದ ಪ್ರತಿಕ್ರಿಯೆಯಾಗಿದೆ. ಹಠಾತ್ ಪ್ರವೃತ್ತಿಯಿಂದ ಸ್ವಾಭಾವಿಕತೆಯೆಡೆಗಿನ ಬದಲಾವಣೆಯ ಮಾರ್ಗವೆಂದರೆ ಧ್ಯಾನ”
ಟ್ವಿಟ್ಟರ್ನಲ್ಲಿ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಲು ಕ್ಲಿಕ್ ಮಾಡಿ. https://twitter.com/SriSri
‘ನಾನೇ ಸರಿ’ ಎಂಬ ಭಾವನೆಯು ಬಲವಾದ ಗ್ರಹಿಕೆಗೆ ಸಂಬಂಧಿಸಿದೆ. ನಿಮ್ಮ ಗ್ರಹಿಕೆಯನ್ನಷ್ಟೇ ನೀವು ಬಲವಾಗಿ ನಂಬಿದಾಗ, ನೀವು ನೀತಿವಂತರು ಎಂದು ಭಾವಿಸುತ್ತೀರಿ. ನೀವು 'ಸರಿ' ಎಂದು ಪರಿಗಣಿಸುವುದು ಕೇವಲ ನಿಮ್ಮ ಒಂದು ಗ್ರಹಿಕೆ. ನೀವು ಇದನ್ನು ಅರಿತುಕೊಂಡಾಗ, ಇನ್ನೊಂದು ಬೇರೆಯದೇ ಆಯಾಮವನ್ನು ನೋಡುತ್ತೀರಿ, ಏಕೆಂದರೆ ಗ್ರಹಿಕೆಗಳು ಸದಾ ಬದಲಾಗುತ್ತಲೇ ಇರುತ್ತವೆ.
ಒಂದು ನಿರ್ದಿಷ್ಟವಾದ ಸನ್ನಿವೇಶವನ್ನು ಒಬ್ಬರ ಗ್ರಹಿಕೆಯಿಂದ ‘ಸರಿ’ ಎಂದು ಪರಿಗಣಿಸಿದರೆ ಇನ್ನೊಬ್ಬರ ಗ್ರಹಿಕೆಯಿಂದ ‘ತಪ್ಪು’ ಎಂದು ಸಹ ಪರಿಗಣಿಸಬಹುದು. ಹೀಗೆ ನಿಮಗೆ ಸರಿಯಾಗಿ ಕಂಡದ್ದು ಇನ್ನೊಬ್ಬರಿಗೆ ತಪ್ಪಾಗಿ ಕಾಣಬಹುದು ಮತ್ತು ಇಲ್ಲಿಯೇ ಸಂಘರ್ಷ ಪ್ರಾರಂಭವಾಗುತ್ತದೆ. ಆದ್ದರಿಂದ ನೀವು ಮುಕ್ತ ಮನಸ್ಸನ್ನು ಹೊಂದಿದಾಗ, ನಿಮ್ಮ ಗ್ರಹಿಕೆಗಳು ಬದಲಾಗುತ್ತಿದೆ ಎಂದು ಗಮನಿಸಲು ಅನುಕೂಲವಾಗುತ್ತದೆ. ನಿಮ್ಮ ಗ್ರಹಿಕೆ ಬದಲಾದಾಗ, ನಿಮ್ಮ ಸ್ಥಿರ ಅಭಿಪ್ರಾಯಗಳು ಸಹ ಬದಲಾಗುತ್ತವೆ. ಆಗ ನೀವು ಸಂಪೂರ್ಣವಾಗಿ ವಿಭಿನ್ನ ಸನ್ನಿವೇಶವನ್ನು ನೋಡುತ್ತೀರಿ.
ನೀವು ಕೋಪಗೊಂಡಾಗಲೆಲ್ಲಾ ಅದಕ್ಕೆ ಕಾರಣ ‘ನೀವೇ ಸರಿ’ ಎಂಬ ಭಾವನೆ ಎಂದು ತಿಳಿಯಿರಿ. ತಾವು ನೀತಿವಂತರು ಎಂದು ಭಾವಿಸುವ ಜನರ ಮನೋಭಾವ ವಿಪರೀತದ್ದಾಗಿರುತ್ತದೆ ಮತ್ತು ಅಲ್ಲಿ ತಾಳ್ಮೆಯ ಅಭಾವ ಇರುತ್ತದೆ. ಮನಸ್ಸಿನ ಪ್ರಬುದ್ಧತೆ ಹೆಚ್ಚಾದಾಗ ಮತ್ತು ನೀವು ಹೆಚ್ಚು ಬುದ್ಧಿವಂತರಾದಾಗ, ಖಂಡಿತವಾಗಿಯೂ ನೀವು ನೀತಿವಂತರಾಗಿರುತ್ತೀರಿ, ಆದರೆ ನೀವು ‘ನಾನೇ ಸರಿ’ ಎಂಬ ಭಾವನೆಯನ್ನು ಸಹ ಮೀರಿ ಹೋಗಿರುತ್ತೀರಿ. ನೀವು ಈ ಭಾವನೆಯನ್ನು ಮೀರಿದಾಗ, ಎಲ್ಲವನ್ನೂ ವಿಭಿನ್ನ ಬೆಳಕಿನಲ್ಲಿ ನೋಡುತ್ತೀರಿ. ‘ನಾನೆ ಸರಿ’ ಎಂದು ತಿಳಿಯುವುದು ಒಂದು ದೌರ್ಬಲ್ಯ ಎಂದು ನಾವು ಹೇಳುತ್ತೇವೆ. ನೀತಿವಂತನಾಗಿರುವುದು ಒಳ್ಳೆಯದು, ಆದರೆ ನೀವು ಅದನ್ನು ಅತಿಯಾಗಿ ಖಚಿತಪಡಿಸಿಕೊಂಡರೆ, ನಿಮ್ಮಲ್ಲಿ ಎಲ್ಲೋ ಒಂದು ದೌರ್ಬಲ್ಯವಿದೆ ಎಂದು ನಾವು ಹೇಳುವುದು.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. If you feel distant from someone it's your own fault! CLICK HERE TO READ
2. Know that you are needed, you are useful CLICK HERE TO READ
3. How to Save Your Relationship & How to Resolve Conflict CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು