ಪ್ರಶ್ನೆ 40. ಆತ್ಮೀಯ ಗುರುದೇವ, ಪವಿತ್ರ ಗ್ರಂಥಗಳಲ್ಲಿನ ವಾಸ್ತವಿಕ ಇತಿಹಾಸದಿಂದ ನಾವು ಪುರಾಣ ಮತ್ತು ಸಂಕೇತಗಳನ್ನು ಹೇಗೆ ಅರ್ಥೈಸಿಕೊಳ್ಳಬಹುದು?
ಹೌದು. (ನೀರಿನ ಬಾಟಲಿಯನ್ನು ತೆರೆದು ಅವರ ಪಕ್ಕದಲ್ಲಿನ ಸಸ್ಯಗಳಿಗೆ ನೀರುಣಿಸುತ್ತಾರೆ) ಅವುಗಳಿಗೆ ಸ್ವಲ್ಪ ಬಾಯಾರಿಕೆಯಾಗಿತ್ತು.
ನಿಮಗೆ ತಿಳಿದ ಹಾಗೆ, ಹಿಂದೆ ಇತಿಹಾಸವನ್ನು ಬರೆಯುವ ಶೈಲಿ ಬಹಳ ಕಾವ್ಯಾತ್ಮಕವಾಗಿತ್ತು. ಪ್ರಾಚೀನ ಕಾಲದ ಯಾವುದೇ ಇತಿಹಾಸವನ್ನು ಗದ್ಯ ರೂಪದಲ್ಲಿ ಬರೆಯಲಾಗಿಲ್ಲ. ಅವೆಲ್ಲವೂ ಕಾವ್ಯದ ರೂಪದಲ್ಲಿದೆ. ಕಾವ್ಯವೆಂದರೆ ಅದರಲ್ಲಿ ಲಯವಿರುತ್ತದೆ, ಆದ್ದರಿಂದ ಲಯವನ್ನು ಉಳಿಸಿಕೊಳ್ಳಲು ಉತ್ಪ್ರೇಕ್ಷೆ ಇರುತ್ತದೆ ಮತ್ತು ಸುಂದರೀಕರಣವಿರುತ್ತದೆ. ಕವಿತೆಯು ಸಮತಟ್ಟಾಗಿದ್ದರೆ ಅದು ಕಾವ್ಯವಾಗುವುದಿಲ್ಲ. ಅದರಲ್ಲಿ ಸ್ವಲ್ಪ ಉತ್ಪ್ರೇಕ್ಷೆ ಇರಲೇಬೇಕು. ಆದರೆ ಉತ್ಪ್ರೇಕ್ಷೆಯಿಂದಾಗಿ ನೀವು ಅದನ್ನು ಕಥೆ-ಪುರಾಣವೆಂದು ತಿರಸ್ಕರಿಸಲಾಗುವುದಿಲ್ಲ, ಏಕೆಂದರೆ ಅದರಲ್ಲಿ ಸತ್ಯವೂ ಇದೆ.
ಆಯುರ್ವೇದವನ್ನು ಸಹ ಕಾವ್ಯ ರೂಪದಲ್ಲಿ ಬರೆಯಲಾಗಿದೆ. ಆಯುರ್ವೇದವನ್ನು ಹೊರತುಪಡಿಸಿ ಜಗತ್ತಿನ ಯಾವುದೇ ಔಷಧೀಯ ಪದವಿಯನ್ನು ಕಾವ್ಯದ ರೂಪದಲ್ಲಿ ಕಲಿಸಲಾಗುವುದಿಲ್ಲ. ಜಗತ್ತಿನಲ್ಲಿ, ಕವಿತೆಗಳ ರೂಪದಲ್ಲಿನ ಏಕೈಕ ಔಷಧೀಯ ವ್ಯವಸ್ಥೆ ಇದಾಗಿದೆ. ಕಾವ್ಯದ ರೂಪದಲ್ಲಿರುವುದರಿಂದ ಇದನ್ನು ಹೃದಯದಲ್ಲಿ ನೆನಪಿಟ್ಟುಕೊಳ್ಳುವುದು ಸಹಸುಲಭವಾಗಿದೆ. ಆ ದಿನಗಳಲ್ಲಿ, ಹೆಚ್ಚಿನ ಪುಸ್ತಕಗಳು ಇರಲಿಲ್ಲ, ಆದ್ದರಿಂದ ಜನರು ಎಲ್ಲವನ್ನೂ ಕಾವ್ಯವನ್ನಾಗಿ ಮಾಡಿದರು. ಆರೋಗ್ಯಕರ ವಸ್ತುಗಳು, ಆರೋಗ್ಯಕರ ಅಭ್ಯಾಸಗಳು ಸಹ ಕಾವ್ಯದ ರೂಪದಲ್ಲಿದ್ದವು. ಇದನ್ನು ಮನಸ್ಸಿನಲ್ಲಿಟ್ಟುಕೊಂಡರೆ, ಇತಿಹಾಸದ ನೈಜ ಸಂಗತಿಗಳನ್ನು ಗುರುತಿಸುವಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.
ಇಂದು ಖಗೋಳ ಭೌತಶಾಸ್ತ್ರ (ಆಸ್ಟ್ರೋಫಿಸಿಕ್ಸ್) ಎಂದು ಕರೆಯಲ್ಪಡುವ ಒಂದು ವಿಷಯವೇ ಇದೆ. ಇದರಲ್ಲಿ ಐತಿಹಾಸಿಕ ಘಟನೆಗಳ ನಿಖರವಾದ ದಿನಾಂಕಗಳನ್ನು ಕಂಡುಕೊಳ್ಳುತ್ತಾರೆ. ಅದಕ್ಕಾಗಿ ಸಾಫ್ಟ್‌ವೇರ್ ಸಹ ಲಭ್ಯವಿದೆ. ನಮ್ಮ ಆರ್ಟ್ ಆಫ್ ಲಿವಿಂಗ್ ನ ಸದಸ್ಯರೇ ಆದ ಡಾ|| ಡಿ.ಕೆ. ಹರಿ ಮತ್ತು ಹೇಮಾ ಹರಿ ಅವರು ರಾಮಾಯಣ ಮತ್ತು ಮಹಾಭಾರತದ ಐತಿಹಾಸಿಕ ಸಂಗತಿಗಳ ಕುರಿತು ವೆಬ್ ಪುಟಗಳನ್ನು ಮಾಡಿದ್ದಾರೆ. ನಿಮಗೆ ಆಸಕ್ತಿ ಇದ್ದರೆ, ನೀವು ಆ ವೆಬ್ ಪುಟಗಳನ್ನು ಸಹ ನೋಡಿ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. How Did the Twelve Jyotirlingas (Sacred Divine Shrines of Lord Shiva) Come into Existence? CLICK HERE TO READ
2. 10 mystical facts about Lord Ganesha CLICK HERE TO READ
3. Story of two gate keepers who did not allow few devotees to see GOD! CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು