ಪ್ರಶ್ನೆ 39. ಗುರುದೇವ, ನಮ್ಮ ಸುತ್ತಮುತ್ತಲಿನ ಜನರು ಮತ್ತು ಸನ್ನಿವೇಶಗಳು ಆಹ್ಲಾದಕರವಾದಾಗ ನಾವು ಸಂತೋಷವಾಗಿರಬಹುದು. ಆದರೆ ಅದು ಅಹಿತಕರವಾದಾಗ ನಾವು ನಮ್ಮ ಸಂತೋಷವನ್ನು ಹೇಗೆ ಕಾಪಾಡಿಕೊಳ್ಳಬಹುದು?
ಒಮ್ಮೆ ಹಿಂತಿರುಗಿ ನೋಡಿ - ನಿಮ್ಮ ಜೀವನದಲ್ಲಿ ಒಬ್ಬ ವ್ಯಕ್ತಿ, ವಸ್ತು ಅಥವಾ ಸನ್ನಿವೇಶದಿಂದ ನೀವು ಎಷ್ಟು ಬಾರಿ ತೊಂದರೆಗೀಡಾಗಿದ್ದೀರಿ? ಈ ಹಿಂದೆ ನಿಮ್ಮೊಂದಿಗೆ ಈ ರೀತಿ ಎಷ್ಟು ಬಾರಿ ಸಂಭವಿಸಿದೆ? ನೋಡಿ, ಅದರ ಹೊರತಾಗಿಯೂ ಸಹ ಇದೀಗ ನೀವು ಸಂಪೂರ್ಣವಾಗಿ, ಸಂತೋಷವಾಗಿ ಇದ್ದೀರಿ, ಅಲ್ಲವೇ? ನಿಮ್ಮನ್ನು ತೊಂದರೆಗೊಳಪಡಿಸಿದ ಜನರು ಅವರ ಪಾಡಿಗೆ ಅವರು ಮುಂದೆ ಹೋಗಿದ್ದಾರೆ, ಇಲ್ಲವೇ ನಿಧನವೂ ಹೊಂದಿರಬಹುದು; ನಿಮಗೆ ತೊಂದರೆ ನೀಡಿದ ಸಂದರ್ಭಗಳು ಘಟಿಸಿಹೋಗಿವೆ ಮತ್ತು ಈಗಿಲ್ಲ. ಆದರೂ ಜೀವನ ಮುಂದುವರಿಯುತ್ತಿದೆ. ನಿಮ್ಮ ಜೀವನವನ್ನು ಸೂಕ್ಷ್ಮವಾಗಿ ಪರೀಕ್ಷಿಸಿ ನೋಡಿದಾಗ, ಹಿಂದೆ ನಡೆದುದರ ಬಗ್ಗೆ ಪ್ರತಿಬಿಂಬಿಸಿದಾಗ, ನಿಮ್ಮಲ್ಲಿ ಒಂದು ದೊಡ್ಡ ಆಂತರಿಕ ಶಕ್ತಿ ಉದ್ಭವಿಸುತ್ತದೆ. ಇದೆಲ್ಲ ಮಾಯೆ (ಭ್ರಮೆ) ಎಂಬುದು ನಿಮಗೆ ತಿಳಿಯುತ್ತದೆ. ಅದಕ್ಕಾಗಿಯೇ ಈ ಇಡೀ ಜಗತ್ತು ಮಾಯೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಜಗತ್ತು ಭಯ ಹುಟ್ಟಿಸುವಂತೆ ಕಾಣುತ್ತದೆ, ಆದರೆ ಅದು ನಿಜವಲ್ಲ.
ಚಿಕ್ಕವರಿದ್ದಾಗ, ಆಹಾರವನ್ನು ಸೇವಿಸಲು ನಿಮ್ಮ ತಾಯಿ ‘ಗುಮ್ಮ ಬರುವನೆಂದು’ ನಿಮ್ಮನ್ನು ಹೆದರಿಸಿರುತ್ತಾರೆ, ಅಲ್ಲವೇ? ಅದು ಎಂದಿಗೂ ಸಂಭವಿಸಿರುವುದಿಲ್ಲ. ಆದರೆ ಕನಿಷ್ಠ ನಿಮ್ಮ ಆಹಾರವನ್ನು ನೀವು ಸೇವಿಸಿರುತ್ತೀರಿ. ಆದ್ದರಿಂದ ಈ ಸುಳ್ಳು ಹೆದರಿಕೆಯಿಂದಲೂ, ಏನಾದರೂ ಒಳ್ಳೆಯದು ಸಂಭವಿಸಿದಂತೆಯೇ.
ಈ ರೀತಿಯಾಗಿ, ಜೀವನದ ಪ್ರತಿಯೊಂದು ಪರಿಸ್ಥಿತಿಯೂ ಒಂದು ಗಬ್ಬರ್ ಸಿಂಗ್ (ಭಾರತೀಯ ಚಿತ್ರರಂಗದ ಜನಪ್ರಿಯ ಖಳನಾಯಕ) ನಂತೆ. ಆ ಗಬ್ಬರ್ ಸಿಂಗ್ (ಇಲ್ಲಿ ಕಠಿಣ ಅಥವಾ ಭಯಭೀತ ಪರಿಸ್ಥಿತಿಯನ್ನು ಪ್ರತಿನಿಧಿಸುತ್ತದೆ)ನ ಉದ್ದೇಶ ಏನೆಂದು ನಿಮಗೆ ತಿಳಿದಿದೆಯೇ? ನಿಮ್ಮಲ್ಲಿರುವ ಕೌಶಲ್ಯವನ್ನು ಹೊರತರುವುದು, ನಿಮ್ಮಲ್ಲಿರುವ ಉತ್ತಮ ಗುಣಗಳನ್ನು ಹೆಚ್ಚಿಸುವುದು. ಇದನ್ನು ಅರ್ಥಮಾಡಿಕೊಳ್ಳಿ. ಈ ನಿಜವಾದ ಸಂಗತಿಯನ್ನು ನೀವು ಅರ್ಥಮಾಡಿಕೊಳ್ಳದಿದ್ದರೆ ಮತ್ತು ಪದೇ ಪದೇ ಸನ್ನಿವೇಶಗಳ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದರೆ, ಖಂಡಿತವಾಗಿಯೂ ನೀವು ಶೋಚನೀಯವಾಗಿರುತ್ತೀರಿ. ಒಮ್ಮೆ ನೀವು ಇದನ್ನು ಅರಿತುಕೊಂಡರೆ ಜೀವನದ ಯಾವುದೇ ಪರಿಸ್ಥಿತಿಯು ನಿಮ್ಮನ್ನು ತೊಂದರೆಗೊಳಪಡಿಸುವುದಿಲ್ಲ.
ನೋಡಿ, ಕೆಲವು ಕರ್ಮಗಳನ್ನು ನೀವು ಸುಮ್ಮನೆ ಸಹಿಸಿಕೊಳ್ಳಬೇಕಾಗುತ್ತದೆ ಮತ್ತು ಇನ್ನೂ ಕೆಲವು ಕರ್ಮಗಳಿಂದ ಮುಕ್ತರಾಗಲು ನೀವು ದೈವವನ್ನು ಪ್ರಾರ್ಥಿಸಬಹುದು. ಸ್ವ-ಪ್ರಯತ್ನ ಮತ್ತು ಪ್ರಾರ್ಥನೆ ಎರಡೂ ಜೀವನದಲ್ಲಿ ಕೈಜೋಡಿಸಬೇಕು. ಎರಡರಲ್ಲಿ ಯಾವುದೊಂದು ಇಲ್ಲದಿದ್ದರೂ ನೀವು ಶೋಚನೀಯವಾಗಿರುತ್ತೀರಿ. ಅವು ಬೈಸಿಕಲ್‌ನ ಎರಡು ಚಕ್ರಗಳಂತೆ - ಒಂದು ಇಲ್ಲದಿದ್ದರೂ ನೀವು ಜೀವನದಲ್ಲಿ ಮುಂದೆ ಸಾಗಲು ಸಾಧ್ಯವಿಲ್ಲ. ನೀವು ಯಾವುದೇ ರೀತಿಯ ಪ್ರಯತ್ನವನ್ನು ಮಾಡದೆ ಕೇವಲ ಪ್ರಾರ್ಥನೆ ಮಾಡುತ್ತಿದ್ದರೆ ನಿಮಗೆ ಯಾವುದೇ ಫಲಿತಾಂಶ ದೊರೆಯುವುದಿಲ್ಲ, ಮತ್ತು ನೀವು ಬರೀ ಪ್ರಯತ್ನವನ್ನೇ ಮಾಡುತ್ತಾ, ಹೋರಾಟಕ್ಕೆ ಬಿದ್ದು ಪ್ರಾರ್ಥನೆಗೆ ಸಮಯವನ್ನು ನೀಡದೇ ಇದ್ದರೂ ಸಹ ನಿಮಗೆ ಯಾವುದೇ ರೀತಿಯ ಸಹಾಯವಾಗುವುದಿಲ್ಲ. ನೀವು ಪ್ರಯತ್ನ ಮತ್ತು ಪ್ರಾರ್ಥನೆ ಎರಡನ್ನೂ ಮಾಡಿದಾಗ, ಕೌಶಲ್ಯದಿಂದ ಮತ್ತು ಸಂತೋಷದಿಂದ ಜೀವನವನ್ನು ಸಾಗಿಸಲು ಸಾಧ್ಯವಾಗುತ್ತದೆ. ನಿಮ್ಮ ಮಾರ್ಗ ಸುಲಭವಾಗುತ್ತದೆ.
ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. 5 Tips for living Happy by Gurudev Sri Sri Ravi Shankar: CLICK HERE TO READ
2. Develop the habit of being Happy, no one can do it for you: CLICK HERE TO READ
3. What are you unhappy for? Mind-blowing secret of Happiness: CLICK HERE TO READ
ಸೋಷಿಯಲ್ ಮೀಡಿಯಾದಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಕಾಮೆಂಟ್‌ಗಳು