ಪ್ರಶ್ನೆ 34. ಮಾಯೆ ಎಂದರೇನು ಮತ್ತು ಆಕಾಶ ತತ್ತ್ವವನ್ನು ಅಳತೆ ಮಾಡಬಹುದೇ? | ಗುರುದೇವ್ ಶ್ರೀ ಶ್ರೀ ರವಿಶಂಕರ್


ಗುರುದೇವ್ ಶ್ರೀ ಶ್ರೀ ರವಿಶಂಕರ್:


ಯಾವುದನ್ನು ಅಳೆಯಬಹುದೋ ಅದನ್ನು ಮಾಯೆ ಎನ್ನಬಹುದು. ಈ ಇಡೀ ಜಗತ್ತನ್ನು ಅಳೆಯಬಹುದು, ಹಾಗಾಗಿ ಅದು ಮಾಯೆ. ಪಂಚಭೂತಗಳಾದ ಪೃತ್ವಿ, ಜಲ, ಅಗ್ನಿ, ವಾಯು ಮತ್ತು ಆಕಾಶ, ಇವುಗಳನ್ನು ಅಳೆಯಬಹುದು.


ಅಳೆಯುವಿಕೆ ಯಾವಾಗಲೂ ಇನ್ನೊಂದು ವಸ್ತುವಿನ ಮೇಲೆ ಆಧರಿಸಿರುತ್ತದೆ ಹಾಗಾಗಿ ಅದು ಸಂಪೂರ್ಣವಲ್ಲ. ಉದಾ: ಭೂಮಿಯ ಮೇಲೆ 6 ಕಿಲೋ ತೂಗುವ ವಸ್ತು ಚಂದ್ರನ ಮೇಲೆ ಕೇವಲ 1 ಕಿಲೋ ತೂಗುತ್ತದೆ. ಇಂದು ನೀವು ನೋಡುವ ನಕ್ಷತ್ರದ ಬೆಳಕು ನಿಜವಾಗಿಯೂ ಇಂದಿನ ಬೆಳಕಲ್ಲ. ನಕ್ಷತ್ರದ ಬೆಳಕು ನಿಮ್ಮನ್ನು ತಲುಪಲು ಕನಿಷ್ಠ 4 ವರ್ಷಗಳನ್ನು ತೆಗೆದುಕೊಳ್ಳುತ್ತದೆ! ಗಾಳಿ, ನೀರು ಮತ್ತು ಭೂಮಿಯ ಮಾಪನದಲ್ಲಿ ಗಾತ್ರ ಹಾಗು ತೂಕ ಎರಡೂ ಬದಲಾಗುತ್ತವೆ. ಆದ್ದರಿಂದ "ಅಳತೆ" ಎಂಬುದು ಕೇವಲ ಭ್ರಮೆ ಮತ್ತು ವಿಶ್ವಾಸಾರ್ಹವಲ್ಲ. ನಿಮ್ಮ ಮೂಳೆಗಳು, ಚರ್ಮ, ದೇಹ, ಪರಿಸರ ಮತ್ತು ಪಂಚ ಮಹಾಭೂತಗಳನ್ನು ಅಳೆಯಬಹುದು; ನೀವು ಅದಕ್ಕೆ ಒಂದು ಮೌಲ್ಯವನ್ನು ಹಾಕಬಹುದು. ಆದ್ದರಿಂದ, ಇಡೀ ಜಗತ್ತು ಮಾಯೆಯೇ ಸರಿ!


ಎಲ್ಲಾ ಅಳತೆಗಳು ಸಾಪೇಕ್ಷ ತಿಳುವಳಿಕೆಯೇ. ಈ ನಿಟ್ಟಿನಲ್ಲಿ ಐನ್‌ಸ್ಟೈನ್‌ರ ಸಾಪೇಕ್ಷ ಸಿದ್ಧಾಂತವು (Theory of relativity) ಅದ್ವೈತ ತತ್ತ್ವಶಾಸ್ತ್ರದೊಂದಿಗೆ ಪರಸ್ಪರ ಸಂಬಂಧ ಹೊಂದಿದೆ.


ಆದರೆ, ಯಾವುದು ಮಾಯೆಯಲ್ಲ?  ಯಾವುದನ್ನು ಅಳತೆ ಮಾಡಲಾಗುವುದಿಲ್ಲವೋ ಅದೆಲ್ಲವೂ ಮಾಯೆಯಲ್ಲ. ನೀವು 1 ಲೀಟರ್ ಪ್ರೀತಿ, 2 ಲೀಟರ್ ಶಾಂತಿ, 5 ಕಿಲೋ ಸಂತೋಷವೆಂದು ಹೇಳಲು ಸಾಧ್ಯವಿಲ್ಲ, ‘ನಿಮ್ಮ’ನ್ನು ಅಳೆಯಬಹುದೇ? ಅದೂ ಸಾಧ್ಯವಿಲ್ಲ. ನಿಮ್ಮ ದೇಹವು ತೂಕವನ್ನು ಹೊಂದಿದೆ, ಆದರೆ ನೀವಲ್ಲ. ಸತ್ಯವನ್ನು ಅಳೆಯಲು ಸಾಧ್ಯವಿಲ್ಲ, ಆನಂದವನ್ನು ಅಳೆಯಲು ಸಾಧ್ಯವಿಲ್ಲ, ಸಂತೋಷವನ್ನು ಅಳೆಯಲು ಸಾಧ್ಯವಿಲ್ಲ, ಸೌಂದರ್ಯವನ್ನು ಅಳೆಯಲು ಸಾಧ್ಯವಿಲ್ಲ. ಇವೆಲ್ಲವೂ ಪ್ರಜ್ಞೆ ಅಥವಾ ಈಶ್ವರ(ದೈವತ್ವ) ಭಾಗವಾಗಿದೆ ಮತ್ತು ಇದನ್ನು ‘ಮಯಿ’ ಎಂದು ಹೇಳಲಾಗುತ್ತದೆ.



ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನೂ ಸಹ ಓದಬಹುದು:

1. How to get out of the web of Maya?: CLICK HERE TO READ

2. What is Maya? Explained by Gurudev: CLICK HERE TO READ

3. Three types of Space: CLICK HERE TO READ




ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar



ಕಾಮೆಂಟ್‌ಗಳು