ಪ್ರಶ್ನೆ 33. ನಾನು ಒಳಗೆ ದುಃಖದಿಂದ ಬಳಲುತ್ತಿದ್ದರೂ ಸಹ, ಮುಖದಲ್ಲಿ ನಗು ಇಟ್ಟುಕೊಂಡು ಸಂತೋಷದಿಂದ ಇರಲು ಸಾಧ್ಯವೇ?


ಗುರುದೇವ್ ಶ್ರೀ ಶ್ರೀ ರವಿ ಶಂಕರ್:

ನಿಮ್ಮ ಜೀವನವು ಎಲೆಯ ಮೇಲೆ ಬಡಿಸಿದ ಮಿಶ್ರ ಭೋಜನದಂತೆ. ಇದರಲ್ಲಿ ಸಿಹಿ, ಹುಳಿ, ಉಪ್ಪು, ಖಾರ - ಹೀಗೆ ಎಲ್ಲಾ ರೀತಿಯ ವಿಭಿನ್ನ ರುಚಿಗಳೂ ಇರುತ್ತವೆ. ಅದರಿಂದ ನಿಮ್ಮ ಜೀವನದಲ್ಲೂ ಸಹ ಸ್ವಲ್ಪ ದುಃಖವಿರಬಹುದು (ಬಹುಶಃ ನೀವು ಯಾರನ್ನಾದರೂ ಕಳೆದುಕೊಂಡಿರಬಹುದು ಅಥವಾ ಹಣವನ್ನು ಕಳೆದುಕೊಂಡಿರಬಹುದು). ನಿಜ, ಅದು ನಿಮಗೆ ನೋವನ್ನುಂಟುಮಾಡುತ್ತದೆ. ಆದರೆ ನೀವು ಆ ನೋವನ್ನೇ ಹಿಡಿದಿಟ್ಟುಕೊಂಡು ಇದ್ದರೆ ಜೀವನವು ಮುಂದುವರಿಯಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ನೀವು ಬುದ್ಧಿವಂತಿಕೆಯಿಂದ ಆಧ್ಯಾತ್ಮಿಕತೆ ಮತ್ತು ಜ್ಞಾನ ಮಾರ್ಗದಲ್ಲಿ ಸಾಗದಿದ್ದರೆ ಮತ್ತು ಅಲ್ಲಿ ಇಲ್ಲಿ ಇರುವ ಕೆಲವು ಸಣ್ಣ ಕುಂದುಕೊರತೆಗಳನ್ನೇ ಚಿಂತಿಸುತ್ತಾ ನಗುವುದನ್ನೇ ನಿಲ್ಲಿಸಿದರೆ, ಜಗತ್ತು ನಿಮಗೆ ಒಂದು ಖಿನ್ನತೆಯ ಸ್ಥಳವಾಗಿ ಕಾಣುತ್ತದೆ. ನೀವು ನಗುತ್ತಲ್ಲಿರಬೇಕು. ನಿಮ್ಮೊಳಗಿನ ಯಾವುದೇ ನೋವು ಅಥವಾ ಸಂಕಟಗಳು ಕೊನೆಯಾಗುತ್ತವೆ ಎಂಬ ಬಲವಾದ ವಿಶ್ವಾಸವನ್ನು ಹೊಂದಿರಬೇಕು. ಕೊನೆಗೆ ಯಾವುದೂ ಪ್ರಸ್ತುತವಲ್ಲ. ನೋವನ್ನು ಸಹಿಸಿಕೊಳ್ಳುವ ಬುದ್ಧಿಯನ್ನು ಇಟ್ಟುಕೊಂಡು ಜ್ಞಾನ ಮಾರ್ಗದಲ್ಲಿ ನಗುವಿನೊಂದಿಗೆ ಮುಂದುವರಿಯಿರಿ.

ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:

1. The Great Formula of Happiness: CLICK HERE TO READ

2. Life is a combination of Happiness & Peace: CLICK HERE TO READ

3. List of all wisdom articles by Gurudev on Happiness: CLICK HERE TO ACCESS ALL

ವೀಡಿಯೊ:





ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು