ಪ್ರಶ್ನೆ 32. ದೇವರು ಏಕೆ ಪಕ್ಷಪಾತ ಮಾಡುತ್ತಾನೆ, ಕೆಲವರಿಗೆ ಮಾತ್ರ ಒಳ್ಳೆಯದನ್ನು ಮಾಡುತ್ತಾನೆ ಮತ್ತು ಕೆಲವರ ಪ್ರಾರ್ಥನೆಗೆ ಉತ್ತರಿಸುವುದಿಲ್ಲ? | ಗುರುದೇವ್ ಶ್ರೀ ಶ್ರೀ ರವಿಶಂಕರ್
ಕೆಲವರ ಪ್ರಾರ್ಥನೆಗೆ ಉತ್ತರ ಸಿಗುತ್ತದೆ ಮತ್ತೂ ಕೆಲವರಿಗೆ ಸಿಗುವುದಿಲ್ಲ, ಏಕೆ ಹೀಗೆಂದು ನನಗೂ ಗೊತ್ತಿಲ್ಲ. ಬಹುಷಃ ಕೆಲವರ ಪ್ರಾರ್ಥನೆಗೆ ಉತ್ತರ ಸಿಗದಿರುವುದರಿಂದಲೇ ಅವರಿಗೆ ಶ್ರೇಯಸ್ಕರವಿರಬಹುದು. ಅದರಿಂದಲೇ ನಿಮಗೆ ಒಳ್ಳೆಯದಾಗಬಹುದು. ಬಹುಷಃ ನಿಮ್ಮ ಮನಸ್ಸು ಬದಲಾಗಿ ಪ್ರಾರ್ಥನೆಯೂ ಕೂಡ ಬದಲಾಗಬಹುದು. ಜನರು ಅಂಗಡಿಗೆ ಹೋಗಿ ವಸ್ತುವನ್ನು ತೆಗೆದುಕೊಂಡು ಮಾಲೀಕನ ಹತ್ತಿರ ಕೇಳುತ್ತಾರೆ, " ಈ ವಸ್ತು ಬೇಡವಾದರೆ ಬದಲಾಯಿಸಿ ಕೊಡುವಿರಾ" ಎಂದು. ಇದು ಭಾರತ ದೇಶದಲ್ಲಿ ಸಾಮಾನ್ಯ.
ಅವರು ಮನೆಗೆ ಹೋಗಿ ಅವರಿಗೆ ಇಷ್ಟವಾಗದಿದ್ದಲ್ಲಿ ಮತ್ತೆ ಮರುದಿನ ಬಂದು ಬದಲಾಯಿಸಿಕೊಳ್ಳುತ್ತಾರೆ. ಹೆಚ್ಚು ವಿಶ್ವಾಸಾರ್ಹವಲ್ಲದ ವಿಷಯವೆಂದರೆ ನಮ್ಮ ಮನಸ್ಸೇ, ಏಕೆಂದರೆ ನಮಗೇನು ಬೇಕು ಮತ್ತು ಬೇಡ ಎಂದು ಮನಸ್ಸಿಗೆ ನಿರ್ದಿಷ್ಟವಾಗಿ ತಿಳಿದಿಲ್ಲ. ಅದರಿಂದ ಮನಸ್ಸನ್ನು ತನ್ನ ಮೂಲ ಸ್ಥಾನಕ್ಕೆ ತರುವುದು ತುಂಬಾ ಅವಶ್ಯಕ. ಮನಸ್ಸನ್ನು ಕೇಂದ್ರೀಕೃತವಾಗಿಸುವುದು ಆಧ್ಯಾತ್ಮದಲ್ಲಿ ಬಹಳ ಮುಖ್ಯ. ಯಾವುದು ಶಾಶ್ವತವಾದದ್ದು ಮತ್ತು ಯಾವುದು ಅಶಾಶ್ವತವಾದದ್ದು, ಯಾವುದು ದೀರ್ಘಕಾಲದ ಸಂತೋಷ ಕೊಡುತ್ತದೆ ಮತ್ತು ಯಾವುದು ಅಲ್ಪಕಾಲದ ಸಂತೋಷ ಕೊಡುತ್ತದೆ, ಇವುಗಳನ್ನು ತಿಳಿದುಕೊಳ್ಳಬೇಕು. ಇದನ್ನೇ ‘ವಿವೇಕ’ ಎಂದು ಕರೆಯಲಾಗುತ್ತದೆ. ಒಂದು ರೀತಿಯ ವಿವೇಚನೆ.
ಗುರುದೇವ ಶ್ರೀ ಶ್ರೀ ರವಿ ಶಂಕರವರ ಅಧಿಕೃತ ಬ್ಲಾಗ್ನಲ್ಲಿ ಅವರ ಈ ಲೇಖನಗಳನ್ನು ಸಹ ಓದಬಹುದು:
1. The Best Kept Secret To Get What You Want: CLICK HERE TO READ!
2. How To Pray (Answered by Gurudev): CLICK HERE TO READ!
3. The Power of Prayer: CLICK HERE TO READ!
ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರನ್ನು ಅನುಸರಿಸಿ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು