ಪ್ರಶ್ನೆ 31. ಮುಕ್ತಿಗೆ ಇರುವ ನಾಲ್ಕು ದ್ವಾರಗಳಲ್ಲಿ ಸತ್ಸಂಗವೂ ಕೂಡ ಒಂದು ಮಾರ್ಗ ಎಂದು ಯೋಗವಸಿಷ್ಠ ಗ್ರಂಥದಲ್ಲಿ ಹೇಳಲಾಗಿದೆ. ಇದರ ಬಗ್ಗೆ ವಿಸ್ತಾರವಾಗಿ ತಿಳಿಸುವಿರಾ? | ಗುರುದೇವ್ ಶ್ರೀ ಶ್ರೀ ರವಿಶಂಕರ್
ಹೌದು, ಜ್ಞಾನೋದಯಕ್ಕೆ ಇರುವ ನಾಲ್ಕು ದ್ವಾರಗಳಲ್ಲಿ ಒಂದು ಸತ್ಸಂಗ, ಸತ್ಯದ ಸಂಘ, ಅಂದರೆ ಸಜ್ಜನರ ಸಹವಾಸ. ಏಕೆಂದರೆ ಒಳ್ಳೆಯ ಸಂಘ ಮಾತ್ರವೇ ನಿಮ್ಮನ್ನು ಮೇಲೆತ್ತಬಲ್ಲದು.
ಹಾಗಾದರೆ ಸಜ್ಜನರ ಸಹವಾಸ ಅಥವಾ ಒಳ್ಳೆಯ ಸಂಘ ಯಾವುದು ಎಂದು ನೀವು ಹೇಗೆ ಅರಿತುಕೊಳ್ಳಬಹುದು? ಯಾರೊಂದಿಗಾದರೂ ಕುಳಿತು ಅವರೊಂದಿಗೆ 30 ನಿಮಿಷಗಳ ಕಾಲ ಮಾತನಾಡಿ. ನಂತರ ನಿಮ್ಮ ಮನಸ್ಸಿನ ಸ್ಥಿತಿಯನ್ನು ಗಮನಿಸಿ. ನಿಮಗೆ ಸಂತೋಷವಾಗಿದೆಯೇ? ನೀವು ಖಿನ್ನತೆಗೆ ಒಳಗಾಗಿದ್ದೀರಾ? ನಿಮ್ಮಲ್ಲಿ ಕೋಪ, ಆಕ್ರೋಶ ಅಥವಾ ದುಃಖವಿದೆಯ? ಅದೇ ಎಲ್ಲವನ್ನೂ ತಿಳಿಸುತ್ತದೆ!
ನಿಮ್ಮ ಸಮಸ್ಯೆಯನ್ನು ನೀವು ಯಾರೊಂದಿಗಾದರೂ ಕುಳಿತು ಚರ್ಚಿಸಿದ ನಂತರ ಆ ಸಮಸ್ಯೆ ಚಿಕ್ಕದೆಂದು ನಿಮಗೆ ಅನ್ನಿಸಿದರೆ, ಅದು ಸತ್ಸಂಗ. ಅದಲ್ಲದೆ ನಿಮ್ಮ ಸಮಸ್ಯೆಗಳನ್ನು ಚರ್ಚಿಸಿದ ನಂತರ ನಿಮಗೆ "ಓಹ್, ಇದು ಒಂದು ಸಣ್ಣ ಸಮಸ್ಯೆ ಎಂದು ನಾನು ಭಾವಿಸಿದ್ದೆ, ಆದರೆ ಇದು ತುಂಬಾ ದೊಡ್ಡದಾಗಿದೆ!" ಎಂದು ಅನಿಸಿದರೆ, ಅದು ಖಂಡಿತ ಸತ್ಸಂಗವಲ್ಲ.
ಸತ್ಸಂಗದಲ್ಲಿ ದೊಡ್ಡ ಸಮಸ್ಯೆಗಳೂ ಸಹ ಚಿಕ್ಕದಾಗಿ ಕಂಡುಬರುತ್ತವೆ. ನಿಮ್ಮ ಉತ್ಸಾಹ ಹೆಚ್ಚಾಗುತ್ತದೆ, ನೀವು ಆತ್ಮವಿಶ್ವಾಸಿಗಳಾಗುತ್ತೀರಿ, ನಿಮ್ಮಲ್ಲಿ ಸಂತೋಷವು ವೃದ್ಧಿಸುತ್ತದೆ ಮತ್ತು ನೀವು ಜನರಿಗೆ ಸೇವೆ ಮಾಡಲು ಬಯಸುತ್ತೀರಿ. ದುರಾಸೆಯಿಂದ ದೂರವಾಗುತ್ತೀರಿ. ಸತ್ಸಂಗ ನಿಮಗೆ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ, ಚೈತನ್ಯವನ್ನು ವೃದ್ಧಿಸಿ ಅಂತರ್ಮುಖಿಯನ್ನಾಗಿ ಮಾಡುತ್ತದೆ ಮತ್ತು ನಿಮ್ಮ ಧೈರ್ಯವನ್ನು ಹೆಚ್ಚಿಸುತ್ತದೆ.
ಕೆಲವೊಮ್ಮೆ ನೀವು ಕಲ್ಪನೆಯ ಪ್ರಪಂಚದಲ್ಲಿ ಮುಳುಗಿದ್ದರೆ, ಸತ್ಸಂಗವು ನಿಮ್ಮನ್ನು ವಾಸ್ತವಕ್ಕೆ ತರುತ್ತದೆ. ನೀವು ಊಹಾಪೋಹದಲ್ಲಿ ಅಥವಾ ಭ್ರಮೆಯಲ್ಲಿ ಸಿಲುಕಿದ್ದರೆ ಸತ್ಸಂಗವು ನಿಮಲ್ಲಿ ವಾಸ್ತವತೆಯ ಅರಿವನ್ನು ಮೂಡಿಸುತ್ತದೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂದು ತಿಳಿದುಕೊಳ್ಳುವ ಹಂತಕ್ಕೆ ನಿಮ್ಮನ್ನು ತರುತ್ತದೆ.
ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರನ್ನು ಅನುಸರಿಸಿ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು