ಪ್ರಶ್ನೆ 30. ಗುರುದೇವ್, ನನಗೆ ಗೊತ್ತಿರುವ ಕೆಲವು ಯುವಕರು ಗಾಂಜಾವನ್ನು ಸೇವಿಸುತ್ತಾರೆ. ಅದು ಅವರನ್ನು ಪ್ರೇರೇಪಿಸುತ್ತದೆ ಮತ್ತು ಬೇರೆ ಲೋಕಗಳಿಗೆ ಕೊಂಡೊಯ್ಯುತ್ತದೆ ಎಂದು ಹೇಳಿಕೊಳ್ಳುತ್ತಾರೆ. ಗಾಂಜಾ ಸೇವಿಸುವುದರಿಂದ ಆಗುವ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ತಿಳಿಸಿಕೊಡಿ.
ಗಾಂಜಾ ಸೇವನೆಗೆ ಬಲಿಯಾಗುವುದು ಒಬ್ಬರು ಮಾಡಿಕೊಳ್ಳಬಹುದಾದ ಭಯಾನಕ ಕೃತ್ಯಗಳಲ್ಲೊಂದು. ಅದರಿಂದ ತಾತ್ಕಾಲಿಕವಾಗಿ ನಿಮ್ಮ ಪ್ರಜ್ಞೆಯು ಮೇಲೇರಿದಂತಾಗಬಹುದು ಆದರೆ ಅದು ದೇಹವನ್ನು ನಾಶಗೊಳಿಸುತ್ತದೆ. ನಿಮ್ಮ ನರಮಂಡಲವನ್ನು ನಾಶಮಾಡುತ್ತದೆ. ನಿಮ್ಮ ದೇಹದ ಅಂಗಗಳಿಗೆ ಅದು ಮಾರಕವಾದದ್ದು.
ಜನರು ಅದನ್ನು ತೆಗೆದುಕೊಳ್ಳುವುದರಿಂದ ಮತ್ತಿನಿಂದ ಉನ್ನತ ಸ್ಥಿತಿಗೇರುತ್ತೇವೆ ಎಂದು ಹೇಳುತ್ತಾರೆ ಆದರೆ ನಾವು ಅದನ್ನು ತೆಗೆದುಕೊಳ್ಳದಿರುವುದರಿಂದ ಅದರ ಅನುಭವದ ಬಗ್ಗೆ ನಮಗೆ ತಿಳಿದಿಲ್ಲ. ಅವರು ಉನ್ನತ ಸ್ಥಿತಿಗೇರುವುದು ಅವರ ಮುಖದಲ್ಲಿ ಕಾಣಿಸುವುದಿಲ್ಲ. ಅವರು ಮಂಕಾಗಿರುವಂತೆ ಕಾಣುತ್ತಾರೆ.
ನಿಮಗೆ ಆಳವಾದ ಧ್ಯಾನದಲ್ಲಿ ಸಿಗುವ ಅನುಭವದಿಂದ ನೀವು ಪ್ರಜ್ವಲಿಸುತ್ತೀರಿ. ಇಲ್ಲಿರುವ ಎಲ್ಲರನ್ನೂ ಗಮನಿಸಿ, ಎಲ್ಲರೂ ಪ್ರಕಾಶಿಸುತ್ತಿದ್ದಾರೆ. ಧ್ಯಾನದಲ್ಲಿ ಪಡೆದುಕೊಳ್ಳುವ ಅನುಭವದಿಂದ ಅವರಿಂದ ಸಂತೋಷ ಉಕ್ಕುತ್ತಿರುತ್ತದೆ ಮತ್ತು ಅವರು ಪ್ರೀತಿಯನ್ನು ಹೊರಸೂಸುತ್ತಾರೆ. ಆದರೆ ಗಾಂಜಾ ಸೇವಿಸುವ ಜನರಲ್ಲಿ ಇದು ಕಾಣಿಸುವುದಿಲ್ಲ. ಬದಲಾಗಿ ಅವರು ಬಾಡಿಹೋಗಿರುತ್ತಾರೆ. ಅವರು ದುಃಖ, ಖಿನ್ನತೆ ಮತ್ತು ರೋಗಪೀಡಿತರಂತೆ ಕಾಣುತ್ತಾರೆ. ಇದು ನಿಮ್ಮ ದೇಹದ ಮೇಲೆ ನೀವು ಮಾಡಿಕೊಳ್ಳಬಹುದಾದ ಅಪರಾಧ.
ಅಪರಾಧವನ್ನು ನೀವು ಬೇರೆಯವರ ಮೇಲೆ ಮಾಡಿರಬಹುದು ಅಥವಾ ನಿಮ್ಮ ದೇಹಕ್ಕೆ ಮಾಡಿಕೊಳ್ಳಬಹುದು, ಈ ಎರಡೂ ಕೂಡ ಅಪರಾಧಗಳೇ. ಗಾಂಜಾ ನಿಮ್ಮ ದೇಹಕ್ಕೆ ಒಂದು ಪೀಡೆ. ಇದು ಸರಿಯಲ್ಲ, ಅದು ನಿಮಗೆ ತಾತ್ಕಾಲಿಕವಾಗಿ ಮೇಲೇರಿಸಬಹುದು ಅಷ್ಟೇ. ಅದಕ್ಕೆ ನೀವು ಏಕೆ ಬಲಿಯಾಗುತ್ತೀರಾ? ನೀವು ಧ್ಯಾನ ಮಾಡುತ್ತಾ ಅದಕ್ಕಿಂತ ಉನ್ನತಿಗೇರುವುದನ್ನು ಕಲಿತುಕೊಳ್ಳಿ. ಧ್ಯಾನದಲ್ಲಿ ನೀವು ಅದಕ್ಕಿಂತ ಹೆಚ್ಚಿನ ಅನುಭವಗಳನ್ನು ಪಡೆದುಕೊಳ್ಳಬಹುದು. ಅದರಿಂದ ನಿಮ್ಮ ದೇಹವು ಸಧೃಡವಾಗುತ್ತದೆ, ಬುದ್ಧಿ ತೀಕ್ಷ್ಣವಾಗುತ್ತದೆ ಮತ್ತು ನಿಮ್ಮ ಹೃದಯದಲ್ಲಿ ಅನುಕಂಪ ಮೂಡುತ್ತದೆ. ಅದು ನಿಮಗೆ ಒಳ್ಳೆಯ ಆರೋಗ್ಯ ಮತ್ತು ಖುಷಿಯನ್ನು ತಂದುಕೊಡುತ್ತದೆ. ಗಾಂಜಾದ ಬದಲಾಗಿ ನೀವೇಕೆ ಧ್ಯಾನವನ್ನು ಆರಿಸಿಕೊಳ್ಳಬಾರದು? ಗಾಂಜಾ ಸೇವನೆ ಅವರಿಗೇ ಅವರೇ ಮಾಡಿಕೊಳ್ಳುವ ಮೋಸ.
ಗುರುದೇವರಿಂದ ನೀಡಲ್ಪಟ್ಟ ಆಂಗ್ಲ ಭಾಷೆಯಲ್ಲಿರುವ ಈ ಜ್ಞಾನವನ್ನು ಓದಿ:
1. ಏನನ್ನೂ ಕಳೆದುಕೊಳ್ಳದೆ ಉನ್ನತಿ ಹೇಗೆ ಪಡೆಯುವುದು: A Talk by Gurudev - CLICK HERE TO READ
ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರನ್ನು ಅನುಸರಿಸಿ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು