ಪ್ರಶ್ನೆ 28. ಗುರುದೇವ್, ಒಳ್ಳೆಯ ಸಂವಹನಶೀಲರಾಗಲು (ಇತರರಿಗೆ ತಿಳಿಸುವುದು) ಕೆಲವು ಸಲಹೆಗಳನ್ನು ಕೊಡುವಿರಾ? | ಗುರುದೇವ್ ಶ್ರೀ ಶ್ರೀ ರವಿಶಂಕರ್
ಸಂವಹನ ಮೂರು ವಿಧಾನಗಳಲ್ಲಿ ನಡೆಯುತ್ತದೆ: ಬುದ್ಧಿಯ ಮಟ್ಟದಲ್ಲಿ ಮಾತಾಡುವುದು ಅಥವಾ ಸಂಭಾಷಣೆ, ಹೃದಯದ ಸ್ಥರದಲ್ಲಿ ಸಂಗೀತದಿಂದ, ಆತ್ಮದ ಸ್ಥರದಲ್ಲಿ ಮೌನದಿಂದ ಆಗುತ್ತದೆ.
ನೀವು ಜನರ ಜೊತೆ ವ್ಯವಹರಿಸುವಾಗ ಸಂಭಾಷಣೆಯು ಹೆಚ್ಚು ಬಾರಿ ಬುದ್ಧಿಯ ಮಟ್ಟದಲ್ಲೇ ನಡೆಯುತ್ತದೆ. ನೀವು ಪ್ರಕೃತಿಯ ಜೊತೆಗಿದ್ದಾಗ ನೀವು ಹಾಡುತ್ತೀರಿ ಹಾಗು ಹೃದಯದ ಸ್ಥರದಲ್ಲಿ ಸಂವಹಿಸುತ್ತೀರಿ. ನೀವು ಜನರೊಟ್ಟಿಗೆ ಬರಿ ಮಾತು ಅಥವಾ ದೂರುಗಳಲ್ಲೇ ಕಳೆಯುತ್ತಿರುತ್ತೀರಿ ಆದ್ದರಿಂದ ಸಂಭಾಷಣೆ ಬರಿ ಬುದ್ಧಿಯ ಮಟ್ಟದಲ್ಲೇ ನಡೆಯುತ್ತದೆ. ಆದರೆ ನೀವು ಪ್ರಕೃತಿಯ ಜೊತೆಗಿದ್ದಾಗ ಅದರಲ್ಲೇ ಲಯವಾಗಿರುತ್ತೀರಿ ಮತ್ತು ಸಂಗೀತವನ್ನು ಗುನುಗುನಿಸುತ್ತೀರಿ. ಅದರಿಂದ ಅದು ನಿಮ್ಮ ಹೃದಯದಲ್ಲಿ ನಡೆಯುತ್ತದೆ. ಗುರುಗಳ ಜೊತೆಗಿದ್ದಾಗ ನೀವು ಪೂರ್ಣ ಖಾಲಿಯಾಗಿಬಿಡುತ್ತೀರಿ ಮತ್ತು ಎಲ್ಲಾ ಪ್ರಶ್ನೆಗಳು ಸ್ವಾಭಾವಿಕವಾಗಿ ಮಾಯವಾಗುತ್ತವೆ. ಆಗ ನೀವು ಆತ್ಮದ ಜೊತೆಗಿರುತ್ತೀರಿ ಮತ್ತು ಎಲ್ಲಾ ಉತ್ತರಗಳು ನಿಮಗೆ ಮೌನದಲ್ಲೇ ತಲುಪುತ್ತವೆ.
ನೀವು ಜನರನ್ನು ಬುದ್ಧಿಯಿಂದಲೇ ಅಳತೆ ಮಾಡುತ್ತಿರುತ್ತೀರಿ ಮತ್ತು ನೀವು ಅವರೊಟ್ಟಿಗೆ ಹಾಡುವುದೇ ಇಲ್ಲ (ಸಂಘಟಿತವಾದ ಕಾರ್ಯಕ್ರಮಗಳನ್ನು ಬಿಟ್ಟು). ನಿಮ್ಮ ಅಹಂಕಾರವು ನೀವು ಜನರೊಟ್ಟಿಗೆ ಹಾಡುವುದನ್ನು ತಡೆಯುತ್ತದೆ. ಜನರೊಟ್ಟಿಗೆ ಹಾಡಲು ಬಹಳಷ್ಟು ಮಂದಿಗೆ ತುಂಬಾ ಮುಜುಗರ. ಏಕೆಂದರೆ ಹಾಡಿದಾಗ ಹೃದಯದ ಸ್ಥರಕ್ಕೆ ಇಳಿಯಬೇಕಾಗುತ್ತದೆ ಮತ್ತು ಭಾವನೆಗಳಿಂದ ಸಂವಹಿಸಬೇಕಾಗುತ್ತದೆ. ಕೆಲವರು ಬರಿ ಹಾಡುಗಳನ್ನು ಕೇಳಲು ಬಯಸುತ್ತಾರೆ ಮತ್ತು ಕೆಲವರು ಏಕಾಂಗಿಯಾಗಿದ್ದಾಗ ಮಾತ್ರ ಹಾಡಿಕೊಳ್ಳುತ್ತಾರೆ. ಕೆಲವರು ಇನ್ನೊಬ್ಬರ ಗಮನವನ್ನು ತಮ್ಮ ಕಡೆಗೆ ಸೆಳೆಯಲು ಹಾಡುತ್ತಾರೆ. ಮತ್ತೂ ಕೆಲವರು ಗುಂಪಿನ ಜೊತೆಗೆ ಹಾಡಲು ಇಷ್ಟಪಡುತ್ತಾರೆ. ಈ ಎಲ್ಲವೂ ಅಹಂಕಾರದಿಂದ ಬಂದಿರುವಂತದ್ದು.
ಭಜನೆ ಎಂದರೆ ಹಂಚಿಕೊಳ್ಳುವಿಕೆ ಎಂದರ್ಥ, ನಮ್ಮ ಆಳವಾದ ಅಸ್ತಿತ್ವದ ಸ್ಥರದಿಂದ ಹಂಚಿಕೊಳ್ಳುವುದು. ಅದು ಪರಿಪೂರ್ಣವಾದದ್ದು. ಜನಗಳ ಜೊತೆಯಲ್ಲಿ ನೀವು ಹಾಡಿದರೆ ನಿಮ್ಮ ಅಹಂಕಾರ ನಾಶವಾಗುತ್ತದೆ. ಮಕ್ಕಳು ಯಾರ ಜೊತೆಗಾದರೂ ಹಾಡುತ್ತಾರೆ ಏಕೆಂದರೆ ಅವರಿಗೆ ಅಹಂಕಾರ ಇರುವುದಿಲ್ಲ. ಅಪರಿಚಿತರ ಜೊತೆ ಹಾಡಬೇಕೆಂದರೆ ನಾವು ಅಹಂಕಾರದಿಂದ ಮುಕ್ತರಾಗಿರಬೇಕು. ಅಹಂಕಾರವು ಅಪರಿಚಿತರ ಜೊತೆ ನಿಮ್ಮನ್ನು ಹಾಡಲು ಬಿಡುವುದಿಲ್ಲ. ಬುದ್ಧಿಯ ಸ್ಥರದಲ್ಲಿನ ಸಂವಹನ ಅಹಂಕಾರಕ್ಕೆ ಪೋಷಣೆ ಕೊಡುತ್ತದೆ, ಹೃದಯದ ಸ್ಥರವು ಅಹಂಕಾರವನ್ನು ಹೊಡೆದು ಹಾಕುತ್ತದೆ ಮತ್ತು ಆತ್ಮದ ಸ್ಥರವು ಅಹಂಕಾರವನ್ನು ಕರಗಿಸಿಬಿಡುತ್ತದೆ. ಸಂಭಾಷಣೆಯಲ್ಲಿನ ಎಲ್ಲಾ ನ್ಯೂನತೆಗಳೂ ಕೂಡ ಅಹಂಕಾರದಿಂದಲೇ.
ನಿಮಗೊಂದು ಅಭ್ಯಾಸ: ನೀವು ಜನರೊಂದಿಗೆ ಇರುವಾಗ, ಹರಟೆ ಹೊಡೆಯುವ ಬದಲಿಗೆ ಹಾಡಲು ಪ್ರಾರಂಭಿಸಿ. ತಕ್ಷಣವೇ ನೀವು ಬದಲಾವಣೆಯನ್ನು ಗಮನಿಸಬಹುದು. ನಿಮಗೆ ಹೆಚ್ಚು ಮಸ್ತಿ ಬೇಕೆಂದರೆ, ಅಪರಿಚಿತರನ್ನು ಹಾಡಿನೊಂದಿಗೆ ಸ್ವಾಗತಿಸಿ.
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು