ಪ್ರಶ್ನೆ 27. ದ್ರೌಪದಿಯು, ಕೃಷ್ಣನ ಬಗ್ಗೆ ಭಕ್ತಿ ಮತ್ತು ಶರಣಾಗತಿಯನ್ನು ಹೊಂದಿದ್ದಳು. ಆದರೂ ಕೂಡ ಅವಳ ಜೀವನದಲ್ಲಿ ಏಕೆ ಅಷ್ಟೊಂದು ಕಷ್ಟಗಳು ಎದುರಾಯಿತು? | ಗುರುದೇವ್ ಶ್ರೀ ಶ್ರೀ ರವಿಶಂಕರ್

 


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅಡೆತಡೆಗಳು ಎದುರಾದಾಗ ಮಾತ್ರವೇ ನೀವು ಜೀವನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರ ನಿಗೂಢತೆಗಳನ್ನು ಪ್ರಶಂಶಿಸುತ್ತೀರಿ! ನೋಡಿ, ನೀವೇನಾದರೂ ರಾಮಾಯಣ ಮತ್ತು ಮಹಾಭಾರತಗಳನ್ನು ಅಧ್ಯಯನ ಮಾಡುತ್ತಿದ್ದರೆ, ಅದರಿಂದ ನಿಮ್ಮ ಜೀವನಕ್ಕೆ ಎಷ್ಟನ್ನು ಅಳವಡಿಸಿಕೊಳ್ಳಬಹುದು ಎಂದು ಅವಲೋಕಿಸಿ. ಅವುಗಳಿಂದ ಸಿಗುವ ಒಳ್ಳೆಯ ವಿಚಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಜೀವನದ ಬಗ್ಗೆ ನೀವು ಅವಲೋಕಿಸಿ, ಹೇಗೆ ಈ ಗ್ರಂಥಗಳಿಂದ ನಿಮ್ಮನ್ನು ನೀವು ಉದ್ಧರಿಸಿಕೊಳ್ಳಬಹುದು ಎಂದು ವಿಚಾರ ಮಾಡಿಕೊಳ್ಳಿ. ನಮ್ಮ ಪುರಾಣಗಳಲ್ಲಿ ಎಷ್ಟೊಂದು ಒಳ್ಳೆಯ ಸಂತರು ಮತ್ತು ಸಜ್ಜನರು ಬಂದು ಹೋಗಿದ್ದಾರೆ. ಗ್ರಂಥಗಳನ್ನು ಓದಿ, ಈ ಮಹಾಪುರುಷರುಗಳಿಂದ ನಾವು ಜೀವನದಲ್ಲಿ ತತ್ವಗಳನ್ನು ಅಳವಡಿಸಿಕೊಳ್ಳುವುದು ತುಂಬಾ ಒಳ್ಳೆಯ ವಿಚಾರ.


ಹಾಗೆಯೇ, ನಾವು ವರ್ತಮಾನದ ಬಗ್ಗೆ ಹೆಚ್ಚು ವಿಚಾರ ಮಾಡಬೇಕು, ಈಗಿನ ನಮ್ಮ ಪರಿಸ್ಥಿತಿ ಹೇಗಿದೆ ಎಂದು ಗಮನಿಸಬೇಕು. ನಿಮ್ಮ ಮನಸ್ಸಿನ ಸ್ಥಿತಿ ಈಗ ಹೇಗಿದೆ? ನೀವು ವರ್ತಮಾನದಲ್ಲಿ ಸಂತೋಷವಾಗಿದ್ದೀರಾ? ನೀವು ಕೆಲವು ಸೇವೆಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬೇರೆಯವರಿಗೆ ಸಹಾಯ ಮಾಡಲು ಸಿದ್ಧರಿದ್ದೀರಾ? ಈ ವಿಷಯಗಳ ಬಗ್ಗೆ ಚರ್ಚಿಸಿ ಮತ್ತು ಗಮನ ಕೊಡಿ.


ವೀಡಿಯೊ:



ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು