ಪ್ರಶ್ನೆ 9: ಗುರುದೇವ್, ವೈದಿಕ ಪರಂಪರೆ ಮತ್ತು ವಿಜ್ಞಾನದ ನಡುವೆ ವ್ಯತ್ಯಾಸವಿದೆಯೇ?




ಗುರುದೇವ್ ಶ್ರೀ ಶ್ರೀ ರವಿಶಂಕರ್:


ನೋಡಿ, ನಮ್ಮ ಪೂರ್ವಜರು ಬುದ್ಧಿಶಕ್ತಿಗೆ ಮೊದಲ ಪ್ರಾಶಸ್ತ್ಯ ಮತ್ತು ಪ್ರಾಮುಖ್ಯತೆ ನೀಡಿದ್ದಾರೆ. ನಮ್ಮ ಪ್ರಮುಖ ಮಂತ್ರವಾದ ಗಾಯತ್ರಿ ಮಂತ್ರ ಸರಿಸಾಟಿಯಿಲ್ಲದ್ದು. ಗಾಯತ್ರಿ ಮಂತ್ರದಲ್ಲಿ “ಧಿಯೋ ಯೋ ನಃ ಪ್ರಚೋದಯಾತ್” ಎಂದು ಹೇಳಲಾಗುತ್ತದೆ. ಇದರರ್ಥ “ನಮ್ಮ ಬುದ್ಧಿಶಕ್ತಿ ಬೆಳಗಲಿ ಮತ್ತು ಅದಕ್ಕೆ ದೈವಶಕ್ತಿ ಪ್ರೇರಿತವಾಗಲಿ” ಎಂದು. ಇದು ಕೇವಲ ಒಬ್ಬ ವ್ಯಕ್ತಿಯ ಬುದ್ಧಿಶಕ್ತಿಗಾಗಿ ಪ್ರಾರ್ಥಿಸುವುದಲ್ಲ, ಮಂತ್ರವು ಪ್ರತಿಯೊಬ್ಬರ ಮನಸ್ಸು ಮತ್ತು ಬುದ್ಧಿಯನ್ನು ದೈವೀಶಕ್ತಿಯಿಂದ ಬೆಳಗಿಸಬೇಕು ಮತ್ತು ಪ್ರೇರೇಪಿಸಬೇಕೆಂದು ಪ್ರಾರ್ಥಿಸುತ್ತದೆ.



ಆದ್ದರಿಂದ, ಗಾಯತ್ರಿ ಮಂತ್ರವನ್ನು ಪಠಿಸುತ್ತಾ, ಎಲ್ಲರ ಮನಸ್ಸನ್ನು ಒಟ್ಟಾಗಿ ದೈವದಿಂದ ಪೋಷಿಸಬೇಕೆಂದು ನಾವು ಪ್ರಾರ್ಥಿಸುತ್ತೇವೆ ಮತ್ತು ನಮ್ಮೆಲ್ಲರ ಬುದ್ದಿಶಕ್ತಿ ಅರಳಲಿ ಎಂದು ಪ್ರಾರ್ಥಿಸುತ್ತೇವೆ . ಗಾಯತ್ರಿ ಮಂತ್ರದ ಮೂಲಕ ನಾವು ಮಾಡುವ ಪ್ರಾರ್ಥನೆ ಇದು.


ವಿಜ್ಞಾನವೂ ಕೂಡ ಬುದ್ಧಿ, ತರ್ಕ ಮತ್ತು ವೈಚಾರಿಕತೆಗೆ ಪ್ರಾಮುಖ್ಯತೆಯನ್ನು ನೀಡುತ್ತದೆ. ನಮ್ಮ ಬುದ್ಧಿ ಒಪ್ಪದ ಅಥವಾ ನಮ್ಮ ಬುದ್ಧಿಗೆ ನಿಲುಕದ ಯಾವುದನ್ನೂ ವಿಜ್ಞಾನ ಎಂದು ಕರೆಯಲಾಗುವುದಿಲ್ಲ. ಈ ದೃಷ್ಟಿಕೋನದಿಂದ ನೀವು ವಿಷಯಗಳನ್ನು ನೋಡಿದಾಗ ವಿಜ್ಞಾನ ಮತ್ತು ಆಧ್ಯಾತ್ಮಿಕತೆ ಎರಡೂ ಒಂದೇ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ ಎಂದು ನೀವು ತಿಳಿದುಕೊಳ್ಳಬಹುದು. ಆಧ್ಯಾತ್ಮಿಕತೆಯು ವಿಜ್ಞಾನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, “ಇದು ಏನು?” ಎನ್ನುವ ಪ್ರಶ್ನೆಯ ಜೊತೆಗೆ ಇನ್ನೂ ಆಳವಾಗಿ ಹೋಗಿ “ನಾನು ಯಾರು?” ಎಂದು ವಿಚಾರಿಸುವಂತೆ ಮಾಡುತ್ತದೆ. ಈ ವಿಚಾರಣೆ ಕೂಡ ವಿಜ್ಞಾನದ ಒಳಗೆ ಅಥವಾ ವ್ಯಾಪ್ತಿಯಲ್ಲೇ ಬರುತ್ತದೆ . ಇಲ್ಲಿ ದೃಶ್ಯ ಮಾತ್ರವಲ್ಲ, ಬದಲಿಗೆ ದೃಷ್ಟ ಅಥವಾ ನೋಡುತ್ತಿರುವವರೂ ಸಹ ಅಷ್ಟೇ ಮುಖ್ಯವಾಗುತ್ತಾರೆ. ದೃಷ್ಟ ಸಹ ಇಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ಹೊಂದಿದ್ದಾರೆ, ಆಧ್ಯಾತ್ಮಿಕತೆ ಅಥವಾ ವೈದಿಕ ಸಂಪ್ರದಾಯವು ಈ ಅಂಶವನ್ನು (ದೃಷ್ಟ) ಹೆಚ್ಚು ಸ್ಪಷ್ಟವಾಗಿಸುತ್ತದೆ.







ವೀಡಿಯೊ :



ಕಾಮೆಂಟ್‌ಗಳು