ಪ್ರಶ್ನೆ 8: ಗುರುದೇವ್, ಜೀವನದಲ್ಲಿ ತೃಪ್ತಿಯನ್ನು ಕೊಡುವುದು ಯಾವುದು? ನಾನು ಏನೇ ಮಾಡಿದರೂ ಸ್ವಲ್ಪ ಸಮಯದ ನಂತರ ಅದರಲ್ಲಿನ ಸಂತೋಷ ಮತ್ತು ತೃಪ್ತಿ ಕಡಿಮೆಯಾಗುತ್ತದೆ! | ಗುರುದೇವ್ ಶ್ರೀ ಶ್ರೀ ರವಿಶಂಕರ್


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಏನನ್ನಾದರು ಮಾಡಿದ ನಂತರ ನನಗೆ ತೃಪ್ತಿ ಸಿಗುತ್ತದೆ ಅಂತ ಅಂದುಕೊಳ್ಳುವ ಪ್ರಕ್ರಿಯೆಯೇ ಸರಿಯಲ್ಲ. ತೃಪ್ತಿ ಲಭಿಸುವುದು ನಮ್ಮೊಳಗೆ ನಾವು ಹೋಗಿ ಆಳವಾದ ವಿಶ್ರಾಮ ಪಡೆಯುವುದರಿಂದ. ನಿಮ್ಮ ಆತ್ಮದೊಳಗೆ ನೀವು ಸ್ಥಿರವಾದಾಗ ಸಂತೃಪ್ತಿ ಇರುತ್ತದೆ. ಕೆಲವು ಕರ್ಮಗಳನ್ನು ಮಾಡುವುದರ ಮೂಲಕ ಸಿಗುತ್ತದೆ ಎಂದು ನೀವು ಭಾವಿಸುವ ತೃಪ್ತಿ ಬಹಳ ತಾತ್ಕಾಲಿಕ, ಅದು ಸ್ವಲ್ಪ ಸಮಯದವರೆಗೆ ಮಾತ್ರ ಇರುತ್ತದೆ.

ನಿಮ್ಮ ಕೆಲಸ ಯಶಸ್ವಿಯಾದರೆಇನ್ನೂ ಹೆಚ್ಚಿನ ಕೆಲಸ ಮಾಡುವ ಅವಶ್ಯಕತೆಯಿದೆ ಎಂದು ನೀವು ಭಾವಿಸುತ್ತೀರಿ. ನೀವು ಹೆಚ್ಚು ಯಶಸ್ಸನ್ನು ಪಡೆದಾಗ, ಅದು ಮತ್ತೆ ಹೆಚ್ಚು ಕೆಲಸ ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ. ಯಶಸ್ಸಿನ ನಂತರ ಅಲ್ಲಿಗೇ ನಿಲ್ಲಿಸಬೇಕು ಎಂದು ನಿಮಗೆ ಅನಿಸುವುದಿಲ್ಲ. ಮತ್ತೊಂದೆಡೆ, ನೀವು ನಿಮ್ಮ ಕೆಲಸದಲ್ಲಿ ಸ್ವಲ್ಪ ಹಿನ್ನಡೆ ಅಥವಾ ವೈಫಲ್ಯವನ್ನು ಎದುರಿಸಿದರೆ, “, ನನ್ನ ಪ್ರಯತ್ನಗಳ ಹೊರತಾಗಿಯೂ ಅದು ಹೇಗೆ ವಿಫಲವಾಯಿತು? ನಾನು ಬಿಟ್ಟುಕೊಡುವುದಿಲ್ಲ; ನಾನು ಮರಳಿ ಯತ್ನವ ಮಾಡುತ್ತೇನೆ ಎಂದು ಸಿದ್ಧವಾಗುತ್ತೀರಿ.

ಹೆಚ್ಚಿನದನ್ನು ಮಾಡಲು ನಿಮಗೆ ನೀವು ಸವಾಲು ಹಾಕಿಕೊಳ್ಳುತ್ತೀರಿ. ಆದ್ದರಿಂದ ನೀವು ಹೆಚ್ಚು ಕೆಲಸ ಮಾಡಲು ಬಯಸುತ್ತೀರಿ. ಯಶಸ್ಸು ಅಥವಾ ವೈಫಲ್ಯ, ಎರಡೂ ಸನ್ನಿವೇಶಗಳ ನಂತರ ನೀವು ಹೆಚ್ಚು ಕಾರ್ಯಪ್ರವೃತ್ತರಾಗುತ್ತೀರಿ. ಈ ಪ್ರಕ್ರಿಯೆಯಲ್ಲಿ ತೃಪ್ತಿಗಾಗಿ ಹುಡುಕಾಟ ಮುಂದುವರಿಯುತ್ತಲೇ ಇರುತ್ತದೆ. ನಿರಂತರವಾಗಿ ಕೆಲಸ ಅಥವಾ ಕಾರ್ಯದಲ್ಲಿ ತೊಡಗಿರುವಾಗಲೂ ನೀವು ಅದನ್ನು ಹುಡುಕುತ್ತಲೇ ಇರುತ್ತೀರಿ.

ಜ್ಞಾನದಲ್ಲಿ ಮಾತ್ರ ನೀವು ನಿಜವಾದ ಸಂತೃಪ್ತಿಯನ್ನು ಕಾಣಬಹುದು.

ಪೂರ್ಣವಾದ ಸಂತೃಪ್ತಿ ಇರುವುದು ಜ್ಞಾನದಲ್ಲಿ ಮತ್ತು ಆಳವಾದ ಧ್ಯಾನದಲ್ಲಿ ಮಾತ್ರ; ಯಾವುದೇ ಕಾರ್ಯ ಅಥವಾ ಕ್ರಿಯೆಯಿಂದಲೇ ಅಲ್ಲ.

 

ವೀಡಿಯೊ:


ಕಾಮೆಂಟ್‌ಗಳು