ಪ್ರಶ್ನೆ 7: ಈ ಕೆಳಗಿನ ವಿಷಯಗಳಲ್ಲಿ ನಾನು ಯಾವುದಕ್ಕೆ ಆದ್ಯತೆ ನೀಡಬೇಕೆಂದು ನೀವು ದಯಮಾಡಿ ಮಾರ್ಗದರ್ಶನ ನೀಡುವಿರಾ: ಅಧ್ಯಯನ, ಪೋಷಕರು, ನನ್ನ ಪ್ರೇಯಸಿ, ನನ್ನ ದೇಶ? (ಯುವ ವಿಶೇಷ) | ಗುರುದೇವ್ ಶ್ರೀ ಶ್ರೀ ರವಿಶಂಕರ್

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವು ವಿದ್ಯಾರ್ಥಿಯಾಗಿದ್ದಾಗ, ಅಧ್ಯಯನ ನಿಮ್ಮ ಮೊದಲ ಆದ್ಯತೆ. ನಿಮ್ಮ ಬಳಿ ವಿದ್ಯಾಭ್ಯಾಸ ಇಲ್ಲದಿದ್ದರೆ ನಿಮ್ಮ ಗೆಳತಿ ಸಹ ನಿಮ್ಮಿಂದ ದೂರ ಹೋಗುತ್ತಾಳೆ. ಆದ್ದರಿಂದ, ನೀವು ಮೊದಲು ಉತ್ತಮ ಅಡಿಪಾಯವನ್ನು ಹಾಕಿಕೊಳ್ಳಬೇಕು, ನಂತರ ನೀವು ಇತರ ವಿಷಯಗಳ ಬಗ್ಗೆ ಗಮನ ಕೊಡಬಹುದು. ಆದ್ದರಿಂದ, ಚೆನ್ನಾಗಿ ಓದಿ! ನೀವು ಒಳ್ಳೆಯ ವಿದ್ಯಾಭ್ಯಾಸ ಹೊಂದಿದ್ದರೆ ನೀವು ರಾಷ್ಟ್ರಕ್ಕೂ ಉಪಯುಕ್ತವಾಗುತ್ತೀರಿ ಮತ್ತು ಅದರಿಂದ ನಿಮ್ಮ ಪೋಷಕರಿಗೂ ಸಂತೋಷವಾಗುತ್ತದೆ. ನೀವು ನನಗೆ ತುಂಬಾ ಸರಳವಾದ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ.

ಪ್ರಶ್ನೆ: ಗುರುದೇವ್, ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ. ಅದು ನಿಜವಾದ ಪ್ರೀತಿಯೇ ಅಥವಾ ಬರೀ ಆಕರ್ಷಣೆಯೇ ಎಂದು ಹೇಗೆ ತಿಳಿಯಲಿ?

ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವೇ ಸ್ವತಃ ಪ್ರೀತಿಯಲ್ಲಿ ಬೀಳುತ್ತೀರಿ ಮತ್ತು ಅದು ನಿಜವಾದ ಪ್ರೀತಿಯೋ ಅಥವಾ ಇಲ್ಲವೋ ಎಂದು ನಾನು ನಿಮಗೆ ಉತ್ತರ ಹೇಳಬೇಕೆಂದು ಬಯಸುತ್ತೀರಿ! ನೀವೇ ಇದನ್ನು ಅರ್ಥಮಾಡಿಕೊಳ್ಳುಬೇಕು. ಆಹಾರವನ್ನು ತಿನ್ನುವ ವ್ಯಕ್ತಿಗೆ ಮಾತ್ರ ಆಹಾರದ ರುಚಿ ತಿಳಿದಿರುತ್ತದೆ. ಆ ಬಗ್ಗೆ ಬೇರೊಬ್ಬರು ಹೇಗೆ ತಿಳಿಸಬಹುದು.


ವಿಡಿಯೋ:


ಕಾಮೆಂಟ್‌ಗಳು