ಪ್ರಶ್ನೆ 6: ಕೃಷ್ಣ ಜನ್ಮಾಷ್ಟಮಿಯ ಮಹತ್ವವೇನು ಮತ್ತು ಕೃಷ್ಣನ ನಾಭಿಯ ಭಾಗವನ್ನು ಪದ್ಮನಾಭ (ಸೋಲಾರ್ ಪ್ಲೆಕ್ಸಸ್) ಎಂದು ಏಕೆ ಕರೆಯಲಾಗುತ್ತದೆ?

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ಕೃಷ್ಣನ ಜನನವನ್ನು ಜನ್ಮಾಷ್ಟಮಿಯಂದು ಆಚರಿಸುತ್ತಾರೆ. ಅಷ್ಟಮಿಯು ವಾಸ್ತವದಲ್ಲಿನ ಗೋಚರ ಮತ್ತು ಅಗೋಚರ ಅಂಶಗಳ ನಡುವೆ ಸಮತೋಲನದ ಮಹತ್ವವನ್ನು ಸೂಚಿಸುತ್ತದೆ; ಗೋಚರವಾದ ವಸ್ತುಪ್ರಪಂಚ ಮತ್ತು ಅದೃಶ್ಯವಾದ ಆಧ್ಯಾತ್ಮಿಕತೆ.

ಅಷ್ಟಮಿಯ ದಿನದಂದು ಕೃಷ್ಣನ ಜನನವು, ಅವನಿಗೆ ಆಧ್ಯಾತ್ಮಿಕ ಮತ್ತು ಭೌತಿಕ ಪ್ರಪಂಚಗಳ ಮೇಲಿದ್ದ ಹಿಡಿತವನ್ನು ಸೂಚಿಸುತ್ತದೆ. ಅವನು ಒಬ್ಬ ಉತ್ತಮ ಶಿಕ್ಷಕ, ಆಧ್ಯಾತ್ಮ ಪ್ರೇರಕ ಮತ್ತು ಒಬ್ಬ ಪೂರ್ಣ ರಾಜಕಾರಣಿ. ಒಂದೆಡೆ, ಅವನು ಯೋಗೇಶ್ವರ (ಯೋಗಿಗಳಿಗೇ ಈಶ್ವರ - ಯಾವ ಸ್ಥಿತಿಯನ್ನು ತಲುಪಲು ಪ್ರತಿಯೊಬ್ಬ ಯೋಗಿಯೂ ಆಶಿಸುವನೋ ಅದು) ಮತ್ತೊಂದೆಡೆ ಅವನು ತುಂಟ ಕಳ್ಳ.

ಕೃಷ್ಣನ ವಿಶಿಷ್ಟ ಗುಣವೆಂದರೆ, ಒಮ್ಮೆ ಅವನು ಸಂತರಿಗಿಂತ ಹೆಚ್ಚು ಧರ್ಮನಿಷ್ಠನಾಗಿರುತ್ತಾನೆ ಮತ್ತೊಮ್ಮೆ ಬಹಳ ತುಂಟನಂತೆ ವರ್ತಿಸುತ್ತಾನೆ! ಅವನ ನಡವಳಿಕೆಯು ವಿಪರೀತತೆಯ ಸಮತೋಲನವಾಗಿದೆ - ಇದರಿಂದ ಬಹುಶಃ ಕೃಷ್ಣನ ವ್ಯಕ್ತಿತ್ವವನ್ನು ಅರಿಯುವುದು ತುಂಬಾ ಕಷ್ಟಕರ. ಒಬ್ಬ ಅವಧೂತರಿಗೆ ಹೊರಗಿನ ಜಗತ್ತಿನಲ್ಲಿ ಆಸಕ್ತಿ ಕಡಿಮೆ, ಹಾಗೆಯೇ ಒಬ್ಬ ರಾಜ ಅಥವಾ ರಾಜಕಾರಣಿಗೆ ಆಧ್ಯಾತ್ಮಿಕ ಜಗತ್ತತ್ತಿನಲ್ಲಿ ಆಸಕ್ತಿ ಕಡಿಮೆ, ಆದರೆ ಕೃಷ್ಣ ದ್ವಾರಕಾಧೀಶನೂ ಹೌದು ಮತ್ತು ಯೋಗೇಶ್ವರನೂ ಹೌದು.

ಕೃಷ್ಣನ ಬೋಧನೆಗಳು ನಮ್ಮ ಕಾಲಕ್ಕೆ ಹೆಚ್ಚು ಪ್ರಸ್ತುತ ಏಕೆಂದರೆ ಅವುಗಳು ನಮ್ಮನ್ನು ಪೂರ್ಣ ಭೌತಿಕ ವಸ್ತುಗಳಲ್ಲಿ ಕಳೆದುಹೋಗಲು ಬಿಡುವುದಿಲ್ಲ ಅಥವಾ ನಿಮ್ಮನ್ನು ಸಂಪೂರ್ಣವಾಗಿ ಅವುಗಳಿಂದ ಹಿಂತೆಗೆದುಕೊಳ್ಳುವಂತೆ ಮಾಡುವುದಿಲ್ಲ. ಅವು ನಿಮ್ಮ ಜೀವನವನ್ನು ಪುನರುಜ್ಜೀವನಗೊಳಿಸುತ್ತವೆ, ಒತ್ತಡಗಳಿಂದ ದೂರವಾಗಿ ಹೆಚ್ಚು ಕೇಂದ್ರಿಕೃತ ಮತ್ತು ಕ್ರಿಯಾತ್ಮಕ ವ್ವ್ಯಕ್ತಿತ್ವವನ್ನು ಪಡೆಯಲು ಸಹಾಯ ಮಾಡುತ್ತದೆ. ಕೃಷ್ಣನು ನಮಗೆ ಕೌಶಲ್ಯದ ಜೊತೆಗೆ ಭಕ್ತಿಯನ್ನು ಕಲಿಸುತ್ತಾನೆ. ಗೋಕುಲಾಷ್ಟಮಿಯನ್ನು ಆಚರಿಸುವ ಉದ್ದೇಶವೇನೆಂದರೆ ನಮ್ಮಲ್ಲಿ ಅತ್ಯಂತ ವಿರುದ್ಧ ಮತ್ತು ಹೊಂದಾಣಿಕೆಯ ಗುಣಗಳನ್ನು ಅಳವಡಿಸಿಕೊಂಡು, ಅವುಗಳನ್ನು ನಮ್ಮ ಜೀವನದಲ್ಲಿ ಆಚರಣೆಗೆ ತರುವುದು.

ಆದ್ದರಿಂದ ನೀವು ಜೀವನದಲ್ಲಿ ಎರಡೂ ರೀತಿಯ ಪಾತ್ರಗಳನ್ನು ನಿರ್ವಹಿಸುವುದನ್ನು ತಿಳಿದುಕೊಂಡರೆ ಆಗ ನೀವು ನಿಜವಾಗಿ ಜನ್ಮಾಷ್ಟಮಿಯನ್ನು ಆಚರಿಸಿದಂತೆ - ಒಂದು ಪ್ರಪಂಚಕ್ಕೆ ಒಬ್ಬ ಜವಾಬ್ದಾರಿಯುತ ಪ್ರಜೆಯಾಗುವುದು ಮತ್ತು ಇನ್ನೊಂದು ನಾನು ಈ ಎಲ್ಲಾ ಪಾತ್ರಗಳನ್ನು ಮೀರಿದ, ಯಾವುದಕ್ಕೂ ಅಂಟದ ಪರಬ್ರಹ್ಮನ ಅಂಶವೆಂದು ತಿಳಿದುಕೊಳ್ಳುವುದು. ಸ್ವಲ್ಪ ಅವಧೂತರ ಲಕ್ಷಣ ಹಾಗು ಸ್ವಲ್ಪ ಕ್ರಿಯಾಶೀಲತೆ, ಇವೆರಡನ್ನೂ ಅಳವಡಿಸಿಕೊಳ್ಳುವುದು ಜನ್ಮಾಷ್ಟಮಿಯನ್ನು ಆಚರಿಸುವ ನಿಜವಾದ ಮಹತ್ವ.

ಸೋಲಾರ್ ಪ್ಲೆಕ್ಸಸ್ ನಮ್ಮ ದೇಹದ ಎರಡನೇ ಮೆದುಳು ಅಥವಾ ಮಧ್ಯದ ಮೆದುಳು ಇದ್ದಂತೆ. ಒಬ್ಬ ಯೋಗಿಗೆ ಸೋಲಾರ್ ಪ್ಲೆಕ್ಸಸ್ನ ಗಾತ್ರ ದೊಡ್ಡದಾಗಿರುತ್ತದೆ. ವಿಜ್ಞಾನಿಗಳು ಕೂಡ ಇದನ್ನು ಹೇಳಿದ್ದಾರೆ. ಯೋಗ ಮತ್ತು ಧ್ಯಾನ ಮಾಡದ ವ್ಯಕ್ತಿಯಲ್ಲಿ ಇದು ಚಿಕ್ಕದಾಗಿರುತ್ತದೆ. ಸೋಲಾರ್ ಪ್ಲೆಕ್ಸಸ್ ದೊಡ್ಡದಾಗಿರುವ ವ್ಯಕ್ತಿಯು ಸೃಜನಶೀಲತೆ ಮತ್ತು ಉದಾರ ಭಾವ ಹೊಂದಿರುತ್ತಾನೆ. ಅದು ಸಣ್ಣದಾಗಿದ್ದರೆ ವ್ಯಕ್ತಿಯಲ್ಲಿ ಹೊಟ್ಟೆಕಿಚ್ಚು ಇರುತ್ತದೆ. ಕೃಷ್ಣನನ್ನು ಪದ್ಮನಾಭ ಎಂದು ಕರೆಯಲಾಗುತ್ತದೆ, ಅವನಲ್ಲಿರುವ ಸೋಲಾರ್ ಪ್ಲೆಕ್ಸಸ್ ಸಂಪೂರ್ಣವಾಗಿ ಅರಳಿದ ಹೂವಿನಂತೆ. ಪದ್ಮ ಎಂದರೆ ಬರೀ ಕಮಲವೆಂದಲ್ಲ, ಹೂ ಎಂಬ ಅರ್ಥವೂ ಕೂಡ ಇದೆ. ಸಂಪೂರ್ಣವಾಗಿ ಅರಳಿದ ಹೂವನ್ನು ಸಾಮಾನ್ಯವಾಗಿ ಪದ್ಮನಾಭ ಎಂದು ಕರೆಯಲಾಗುತ್ತದೆ.

ಶ್ರೀ ಕೃಷ್ಣನ ಜನ್ಮ ಕಥೆ:



ಕಾಮೆಂಟ್‌ಗಳು