ಪ್ರಶ್ನೆ 5: ಜೀವನದ ಅಂತಿಮ ಮತ್ತು ಅತ್ಯುನ್ನತ ಸತ್ಯ ಯಾವುದು? ನಾನು ಸಂತೋಷವಾಗಿರುವುದೇ, ಅಥವಾ ಕುಟುಂಬದವರನ್ನು ಸಂತೋಷಪಡಿಸುವುದೇ, ಅಥವಾ ಮಾನವಕುಲದ ಸೇವೆ ಮಾಡುವುದೇ, ಅಥವಾ ದೇವರನ್ನು ತಲುಪುವುದೇ?

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ಜೀವನದ ಅತ್ಯುನ್ನತ ಪ್ರಯಾಣವು ಒಂದು ಹೆಜ್ಜೆಯಿಂದ ಪ್ರಾರಂಭವಾಗುತ್ತದೆ. ಸುಮ್ಮನೇ ಕೂತು ಅತ್ಯುನ್ನತ ಸ್ಥಿತಿಯ ಬಗ್ಗೆ ಕನಸು ಕಾಣುತ್ತಿರಬೇಡಿ. ಬದಲಾಗಿ, ಆ ಕಡೆಗೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸಿ.

ಸತ್ಯದ ಕಡೆಗೆ ಸಣ್ಣ ಸಣ್ಣ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿ; ಜೀವನದ ಈ ವಿಚಾರದ ಕಡೆಗೆ ಗಮನ ಹರಿಸಿ - “ಜೀವನದ ಗುರಿ ಏನು?” ಈ ವಿಚಾರಣೆಯೇ ನಿಮ್ಮನ್ನು ಈ ಮಾರ್ಗದಲ್ಲಿ ಬಹಳ ದೂರ ಕರೆದುಕೊಂಡು ಹೋಗುತ್ತದೆ. ಪ್ರತಿಯೊಂದಕ್ಕೂ ಜೀವನದಲ್ಲಿ ಸ್ವಲ್ಪ ಮಹತ್ವ ಇದ್ದೇ ಇದೆ.

ಕೇವಲ ತಿನ್ನುವುದು ಜೀವನದ ಗುರಿಯಲ್ಲ. ಆದರೂ ಜೀವವನ್ನು ಕಾಪಾಡಿಕೊಳ್ಳಲು ಊಟ ಅತ್ಯಗತ್ಯ. ಅಲ್ಲವೇ? ಅದೇ ರೀತಿ ಮಲಗುವುದೇ ಜೀವನದ ಗುರಿಯಲ್ಲ. ಆದರೆ ನೀವು ನಿದ್ರೆಯನ್ನು ಸಂಪೂರ್ಣವಾಗಿ ಬಿಡಬಹುದೇ? ಇಲ್ಲ, ಅದು ನಿಮಗೆ ಅಸಾಧ್ಯ.

ಅದೇ ರೀತಿ ನೀವು ಸಂತೋಷವಾಗಿರಬೇಕು ಮತ್ತು ಇತರರನ್ನು ಸಂತೋಷವಾಗಿಡಬೇಕು. ಇದು ಸತ್ಯದ ಕಡೆಗೆ ಹಾದಿ.

ಅಂತಿಮ ಸತ್ಯ ಅಥವಾ ಜೀವನದ ಅಂತಿಮ ಉದ್ದೇಶ ಯಾವುದು? ನಮ್ಮ ಪ್ರಕಾರ, ನಿಜವಾಗಿಯೂ ಅಂತಿಮ ಸತ್ಯವನ್ನು ತಿಳಿದಿರುವವರು ನಿಮಗೆ ಹೇಳುವುದಿಲ್ಲ, ಮತ್ತು ಯಾರಾದರೂ ನಿಮಗೆ ಹೇಳುತ್ತಾರೆಂದರೆ ಅವರು ಅದರ ಬಗ್ಗೆ ತಿಳಿದಿಲ್ಲ ಎಂದರ್ಥ. ಇದೇ ರಹಸ್ಯ.

ವೀಡಿಯೊ:

ಕಾಮೆಂಟ್‌ಗಳು