ಪ್ರಶ್ನೆ 4: ಗುರುದೇವ್, ಹಿಂದೆ ನನ್ನ ಮಟ್ಟದಲ್ಲಿಯೇ ಇದ್ದು ಈಗ ನನಗಿಂತ ಉನ್ನತ ಸ್ಥಾನಕ್ಕೆ ಹೋಗಿರುವವರನ್ನು ಕಂಡು ನನಗೆ ಹೊಟ್ಟೆಕಿಚ್ಚು ಬರುತ್ತಿದೆ. ಇದನ್ನು ನಾನು ಹೇಗೆ ಎದುರಿಸಲಿ?


ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪ್ರಗತಿ ಹೊಂದುತ್ತಿರುವವರು ಅಥವಾ ಸಂತೋಷವಾಗಿರುವವರ ಜೊತೆ ಸ್ನೇಹದಿಂದ ವರ್ತಿಸಿ ಮತ್ತು ಅಸಂತೋಷವಾಗಿರುವವರ ಬಗ್ಗೆ ಕನಿಕರ ಇರಲಿ. ಸದಾ ಗೊಣಗಾಡುತ್ತಿರುವ ಮತ್ತು ನಕಾರಾತ್ಮಕ ವ್ಯಕ್ತಿಗಳ ಜೊತೆ ಸ್ನೇಹಪರರಾಗಬೇಡಿ ಏಕೆಂದರೆ ನೀವು ಅವರೊಂದಿಗೆ ಸ್ನೇಹದಿಂದ ಇದ್ದರೆ ನೀವೂ ಸಹ ಅದೇ ಗುಣಗಳನ್ನು ಹೊಂದುತ್ತೀರಿ. ಆದ್ದರಿಂದ ದುಃಖದಲ್ಲಿರುವವರ ಬಗ್ಗೆ ಕನಿಕರ ಇರಲಿ.

ನಿಮ್ಮ ಸ್ನೇಹಿತ ಪ್ರಗತಿ ಹೊಂದುತ್ತಿದ್ದರೆ ನೀವು ಏಕೆ ಅಸೂಯೆಪಡಬೇಕು? ನಿಮ್ಮ ಪ್ರಗತಿಯ ಬಗ್ಗೆ ನಿಮ್ಮ ಸ್ನೇಹಿತರು ಅಸೂಯೆ ಪಟ್ಟರೆ ನೀವು ಅದನ್ನು ಸೀಕರಿಸುತ್ತೀರ? ಈ ಒಂದು ಪ್ರಶ್ನೆಯನ್ನು ನಿಮಗೆ ನೀವೇ ಕೇಳಿ.

ನಾನು ನಿಮಗೆ ಒಂದು ಘಟನೆಯನ್ನು ಹೇಳಲು ಬಯಸುತ್ತೇನೆ: ಒಮ್ಮೆ ಒಬ್ಬ ಹುಡುಗ ತುಂಬಾ ದುಃಖಿತನಾಗಿದ್ದನು ಮತ್ತು ಅವನ ಹೆತ್ತವರು ಅವನನ್ನು ನನ್ನ ಬಳಿಗೆ ಕರೆತಂದರು. ಈ ಹುಡುಗ ಯಾವಾಗಲೂ ಕ್ರೀಡೆಯಲ್ಲಿ ಪದಕಗಳನ್ನು ಪಡೆಯುತ್ತಿದ್ದನು ಆದರೆ ಈ ಬಾರಿ ಅವನು ತನ್ನ ಸ್ನೇಹಿತನ ವಿರುದ್ಧ ಸೋತಿದ್ದನು.

ನಾನು ಅವನಿಗೆ ಒಂದು ಸರಳ ಪ್ರಶ್ನೆಯನ್ನು ಕೇಳಿದೆ, "ನೀನು ಯಾಕೆ ಅತೃಪ್ತವಾಗಿದ್ದೀಯೆ?"

ಅವನು ಹೇಳಿದನು, “ನನಗೆ ಬಹುಮಾನ ಸಿಗಲಿಲ್ಲ” ಎಂದು.

ನಾನು ಕೇಳಿದೆ, "ಯಾರು ಅದನ್ನು ಪಡೆದರು", ಅದಕ್ಕೆ ಅವನು ತನ್ನ ಸ್ನೇಹಿತನಿಗೆ ಸಿಕ್ಕಿದೆ ಎಂದು ಹೇಳಿದನು.

ನಾನು ಹೇಳಿದೆ, “ಇದರರ್ಥ ನಿನ್ನ ಸ್ನೇಹಿತನಿಗೆ ಬಹುಮಾನ ದೊರೆತಿರುವುದಕ್ಕೆ ನೀನು ದುಃಖಿತನಾಗಿದ್ದೀಯೆ ಎಂದು".

ಅದು ಇದ್ದಕ್ಕಿದ್ದಂತೆ ಅವನ ಕಣ್ಣು ತೆರೆಸಿದಂತಾಯಿತು. "ನೀವು ಏನು ಬಯಸುತ್ತೀರಾ? ನೀವು ಗೆದ್ದಾಗ ನಿಮ್ಮ ಸ್ನೇಹಿತರು ಸಂತೋಷವಾಗಿರಲು ಬಯಸುತ್ತೀರಾ ಅಥವಾ ನೀವು ಗೆದ್ದಾಗ ನಿಮ್ಮ ಸ್ನೇಹಿತರು ಅತೃಪ್ತರಾಗಬೇಕೆಂದು ಬಯಸುತ್ತೀರಾ? ”

ಅವನು ಹೇಳಿದನು, “ನಾನು ಓಟವನ್ನು ಗೆದ್ದರೆ ನನ್ನ ಸ್ನೇಹಿತರು ಸಂತೋಷವಾಗಿರಬೇಕು ಎಂದು ನಾನು ಬಯಸುತ್ತೇನೆ”.

ನಾನು ಕೇಳಿದೆ, “ಹಾಗಾದರೆ, ಈಗ ನಿನ್ನ ಸ್ನೇಹಿತ ಓಟವನ್ನು ಗೆದ್ದಿದ್ದರಿಂದ ನೀನು ಯಾಕೆ ಸಂತೋಷವಾಗಿಲ್ಲ?” ಎಂದು.

ಆ ಹುಡುಗನ ಮನಸ್ಥಿತಿಯಲ್ಲಿ ಹಠಾತ್ ಬದಲಾವಣೆಯಾಯಿತು. ಈ ಜಗತ್ತಿನಲ್ಲಿ ಏನು ನಡೆಯುತ್ತಿದೆ ಎಂದು ನಾನು ನಿಮಗೆ ಹೇಳುತ್ತಿದ್ದೇನೆ: ನಾವು ನಮ್ಮ ಬಗ್ಗೆ ಅವಲೋಕನ ಮಾಡುತ್ತಿರುವುದಿಲ್ಲ ಮತ್ತು ಇದರ ಬಗ್ಗೆ ಸ್ವಲ್ಪ ಅರಿವು ಕೂಡ ಎಲ್ಲವನ್ನೂ ವಿಭಿನ್ನಗೊಳಿಸುತ್ತದೆ. ಇಡೀ ಸನ್ನಿವೇಶವು ಬದಲಾಗುತ್ತದೆ.

ಈ ವೀಡಿಯೊ ನೋಡಿ:


ಕಾಮೆಂಟ್‌ಗಳು