ಪ್ರಶ್ನೆ 3: ನೀವು ದೇಹದ ಕುರಿತಾಗಿ ತಿಳಿಸಿದ್ದೀರಿ. ದೇಹ ಮತ್ತು ಪಂಚಮಹಾಭೂತಗಳ ನಡುವಿನ ಸಂಬಂಧವನ್ನೂ ನಾನು ತಿಳಿಯಲು ಬಯಸುತ್ತೇನೆ?

 


ಭೂಮಿ, ಜಲ, ಅಗ್ನಿ, ಗಾಳಿ ಮತ್ತು ಆಕಾಶ, ಇವು ಐದು ಪಂಚಮಹಾಭೂತಗಳು. ಇವುಗಳಲ್ಲಿ ಯಾವುದೇ ಒಂದರ ಅಭಾವವಿದ್ದರೂ ಈ ದೇಹದ ಅಸ್ಥಿತ್ವ ಸಾಧ್ಯವಿಲ್ಲ. ಹೌದಲ್ಲವೇ? ಭೂಮಿಯ ಅಂಶ - ಆಹಾರ, ನೀರಿನ ಅಂಶ, ನಂತರ ನಿಮಗೆ ಬೆಂಕಿಯ ಅಂಶ ಅಥವಾ ಶಾಖ ಬೇಕು. ಶಾಖವಿಲ್ಲದೆ, ಈ ದೇಹವು ಬದುಕಲು ಸಾಧ್ಯವಿಲ್ಲ. ನಂತರ ಗಾಳಿ - ಇದಿಲ್ಲದೆ ದೇಹವು ಅಸ್ತಿತ್ವದಲ್ಲಿರುವುದು ಅಸಾಧ್ಯ, ಮತ್ತು ಜಾಗ ಅಥವಾ ಆಕಾಶ. ದೇಹದ ಅಸ್ತಿತ್ವಕ್ಕೆ ಈ ಐದು ಅಂಶಗಳು ಕಾರಣವಾಗಿವೆ ಮತ್ತು ಈ ದೇಹಕ್ಕೆ ಏನಾಗುತ್ತದೆ? ಈ ದೇಹ ಪಂಚಮಹಾಭೂತಗಳಿಂದ ಬಂದಿದೆ ಮತ್ತು ಅವುಗಳಲ್ಲೇ ಲೀನವಾಗುತ್ತದೆ, ಇದೇ ವಿಜ್ಞಾನ.

ಮೃತ ದೇಹದಲ್ಲಿ ಈ ಐದೂ ಅಂಶಗಳಿವೆ. ಹಾಗಾದರೆ ಜೀವಂತ ಮತ್ತು ಮೃತ ದೇಹದ ನಡುವಿನ ವ್ಯತ್ಯಾಸವೇನು? ಜೀವಂತ ದೇಹದಲ್ಲಿ ಜೀವವಿದೆ, ಹಾಗಾದರೆ ಈ ಜೀವವೆಂದರೇನು?

ಈ ಪ್ರಶ್ನೆ ಪ್ರಾರಂಭವಾದಾಗ ನೀವು ಪ್ರಾಣವನ್ನು ಗಮನಿಸುತ್ತೀರಿ, ನಂತರ ನೀವು ಪ್ರಾಣಶಕ್ತಿಯ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಮಾಡಿದರೆ ಅದಕ್ಕಿಂತ ಹೆಚ್ಚಿನ ಸೂಕ್ಶ್ಮಗಳ ಬಗ್ಗೆ ನಿಮಗೆ ಅರಿವಿಗೆ ಬರುತ್ತದೆ.

ಅದೇನಿರಬಹುದು? ಅದೇ ಮನಸ್ಸು! ಓಹ್, ನಂತರ ಮನಸ್ಸು ಏನು? ಯಾವ ರೀತಿಯ ಮನಸ್ಸುಗಳು ಇರುತ್ತವೆ? ಮನಸ್ಸಿನ ಬೇರೆ ಬೇರೆ ಕೆಲಸಗಳೇನು? ಈ ಕುತೂಹಲವೇ ನಿಮ್ಮನ್ನು 'ಜೀವನ ಕಲೆಯ' ಹತ್ತಿರ ಕರೆದೊಯ್ಯುತ್ತದೆ.


ವೀಡಿಯೊ :


ಕಾಮೆಂಟ್‌ಗಳು