ಪ್ರಶ್ನೆ 25: ಜನರು ನಮ್ಮನ್ನು ಗೌರವಿಸದಿದ್ದರೆ ಏನು ಮಾಡುವುದು? | ಗುರುದೇವ್ ಶ್ರೀ ಶ್ರೀ ರವಿಶಂಕರ್



ಗುರುದೇವ್ ಶ್ರೀ ಶ್ರೀ ರವಿಶಂಕರ್:

ಅವರಿಗೆ ಧನ್ಯವಾದಗಳನ್ನು ತಿಳಿಸಿ. ಅವರು ನಿಮಗೆ ಪರೋಕ್ಷವಾಗಿ ಸ್ವಾತಂತ್ರ್ಯವನ್ನು ಕೊಡುತ್ತಿದ್ದಾರೆ. (ಗುರುದೇವರಿಂದ ನಗು) ! ಜನರು ಯಾವಾಗ ನಿಮ್ಮನ್ನು ತುಂಬಾ ಗೌರವಿಸುತ್ತಾರೋ ಆಗ ಅವರು ನಿಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಅರ್ಥ. ಆಗ ಅವರು ನಿಮ್ಮ ನಗು, ಅವರ ಕಡೆ ಗಮನ ಮತ್ತು ಒಂದು ನಿರ್ದಿಷ್ಠ ರೀತಿಯ ವರ್ತನೆಯನ್ನು ನಿಮ್ಮಿಂದ ಬಯಸುತ್ತಾರೆ. ಯಾರಾದರೂ ನಿಮ್ಮನ್ನು ಗೌರವಿಸದಿದ್ದರೆ ಅವರ ಪ್ರಶ್ನೆಗಳಿಗೆ ನೀವು ಸ್ಪಂದಿಸುವ ಅಗತ್ಯವಿರುವುದಿಲ್ಲ ಮತ್ತು ಯಾವುದೇ ರೀತಿಯ ಔಪಚಾರಿಕತೆಯ ಅಗತ್ಯವಿರುವುದಿಲ್ಲ. ನೀವು ನಿಮ್ಮ ಸಹಜತೆಯಲ್ಲಿ ಪೂರ್ಣವಾಗಿ ಇರಬಹುದು.

ಜನರು ನಿಮ್ಮನ್ನು ಪ್ರೀತಿಸಿದಾಗ ಅಥವಾ ಗೌರವಿಸಿದಾಗ ನೀವೂ ಕೂಡ ಅವರ ಗೌರವಕ್ಕೆ ತಕ್ಕ ಹಾಗೆ ನಡೆದುಕೊಳ್ಳಬೇಕಾಗುತ್ತದೆ ಏಕೆಂದರೆ ನೀವು ಅವರನ್ನು ನೋಯಿಸಿದರೆ ಅವರಿಗೆ ಬೇಸರವಾಗಬಹುದು. ಯಾವಾಗ ಜನರು ನಿಮ್ಮನ್ನು ಗೌರವಿಸುವುದಿಲ್ಲವೋ ಆಗ ನಿಮ್ಮ ವರ್ತನೆಗಳು ಅವರಿಗೆ ಬೇಸರವನ್ನುಂಟುಮಾಡುವುದಿಲ್ಲ. ಅವರು ನಿಮ್ಮನ್ನು ಮುಕ್ತಗೊಳಿಸಿದ್ದಾರೆ ಎಂದು ತಿಳಿದುಕೊಳ್ಳಿ. ನಿಮಗೆ ಗೌರವ ಸಿಗಬೇಕು ಎಂದು ಹಂಬಲಿಸುತ್ತಿದ್ದರೆ, ನೀವು ನಿಮ್ಮ ಸ್ವಾತಂತ್ರ್ಯದ ಅಡವಿಡುತ್ತಿದ್ದೀರಿ ಎಂದು ತಿಳಿದುಕೊಳ್ಳಿ. ಬುದ್ಧಿವಂತಿಕೆಯೆಂದರೆ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟು, ಗೌರವದ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು.


ವೀಡಿಯೊ:




ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar


ಕಾಮೆಂಟ್‌ಗಳು