ಪ್ರಶ್ನೆ 23: ಗುರುದೇವ, ಸೋಮವಾರ ನಾವು ಶಿವನನ್ನು ಆರಾಧಿಸುತ್ತೇವೆ ಮತ್ತು ಶುಕ್ರವಾರ ದೇವಿಯನ್ನು ಆರಾಧಿಸುತ್ತೇವೆ. ಸಮಯ ಮತ್ತು ದೇವರುಗಳ ನಡುವೆ ಸಂಬಂಧವಿದೆಯಾ?


ಗುರುದೇವ್ ಶ್ರೀ ಶ್ರೀ ರವಿಶಂಕರ್:


ಈ ಎಲ್ಲಾ ದಿನಗಳು ನಿಮಗಾಗಿ ಮತ್ತು ನನಗಾಗಿ ಇವೆ (ನಗು). ಎಲ್ಲಾ ಸಮಯವೂ ನಮಗಾಗಿಯೇ ಇದೆ.


ಎಲ್ಲಾ ದಿನಗಳು ಒಂದೊಂದು ಗ್ರಹಗಳ ನಡುವೆ ಸಂಬಂಧವನ್ನು ಹೊಂದಿವೆ. ಒಂದೊಂದು ಗ್ರಹವೂ ಕೂಡ ಒಂದಲ್ಲಾ ಒಂದು ದೇವತೆಗೆ ಸೇರಿದೆ. ಆದರೆ ನೀವು ಈ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ.

ಪ್ರತೀ ಶಿವರಾತ್ರಿಯು ಸೋಮವಾರದಂದೇ ಬೀಳುವುದಿಲ್ಲ. ವಾರದ ಯಾವ ದಿನವಾದರೂ ಶಿವರಾತ್ರಿ ಬರಬಹುದು. ಯಾವ ದಿನ ಶಿವರಾತ್ರಿ ಇರುತ್ತದೋ ಅದು ಶಿವನಿಗೆ ಸೇರಿದ್ದು. ಕೇವಲ ಸೋಮವಾರ ಮಾತ್ರ ಶಿವನಿಗೆ ಸೇರಿದ್ದು ಅಂತೇನೂ ಇಲ್ಲ. ಕೆಲವು ನಕ್ಷತ್ರಗಳು ಮತ್ತು ಗ್ರಹಗಳ ಮೇಲೆ ಶಿವನ ನಿಯಂತ್ರಣ ಇರುತ್ತದೆ, ಆದ್ದರಿಂದ ಈ ರೀತಿಯ ನಿಯಮಗಳನ್ನು ಮಾಡಿರುತ್ತಾರೆ. ಕೇವಲ ದಿನಗಳು ಮಾತ್ರವಲ್ಲ, ನಕ್ಷತ್ರಗಳ ಮೇಲೆ ಕೂಡ ಅದಕ್ಕೆ ನಿರ್ದಿಷ್ಟವಾದ ದೇವತೆಯ ನಿಯಂತ್ರಣ ಇರುತ್ತದೆ. ನೀವು ಪ್ರಾರ್ಥಿಸುವುದಾದರೆ ಪರಮಾತ್ಮನನ್ನೇ ಬೇಡಿಕೊಳ್ಳಿ ಏಕೆಂದರೆ ಅವನೊಳಗೇ ಎಲ್ಲಾ ದೇವ ದೇವತೆಗಳು ಇರುತ್ತಾರೆ.

ಆದ್ದರಿಂದಲೇ ಕುಟುಂಬಗಳಲ್ಲಿ ಇಷ್ಟದೇವತೆ ಅಥವಾ ಕುಲದೇವತೆಯ ಪದ್ಧತಿ ಇರುತ್ತದೆ. ಹಾಗೆಯೇ ಇಡೀ ಗ್ರಾಮಕ್ಕೆ ಗ್ರಾಮದೇವತೆಯ ವ್ಯವಸ್ಥೆ ಇರುತ್ತದೆ. ಆಯಾ ಕ್ಷೇತ್ರಗಳಿಗೆ ಕ್ಷೇತ್ರಪಾಲಿಕರಿರುತ್ತಾರೆ. ಈ ಪದ್ದತಿಗಳೆಲ್ಲಾ ತುಂಬಾ ಸ್ವಾರಸ್ಯಕರ.

ನಾವು ನಮ್ಮ ಪ್ರಾರ್ಥನೆಯನ್ನು ಮೂರ ಸ್ತರಗಳಿಗೆ ಸಲ್ಲಿಸುತ್ತೇವೆ.
1. ಆಧ್ಯಾತ್ಮಿಕ: ಆತ್ಮಜ್ಞಾನದ ಬಗ್ಗೆ ತಿಳಿಸುತ್ತದೆ. ಅದಕ್ಕೆ ಸಂಬಂಧಿಸಿದ ಸಂಪ್ರದಾಯಗಳು ,ಇತ್ಯಾದಿ..
2. ಆದಿಭೌತಿಕ
3. ಆದಿದೈವಿಕ

ಅದಕ್ಕಾಗಿಯೇ ನಾವು ಮೂರು ಬಾರಿ ‘ಶಾಂತಿ’ ಎಂದು ಉಚ್ಛರಿಸುತ್ತೇವೆ, ಆದಿದೈವಿಕ, ಆದಿಭೌತಿಕ ಮತ್ತು ಆಧ್ಯಾತ್ಮಿಕ, ಈ ಮೂರಕ್ಕೂ ಸೇರಿ. ಹಾಗೆಯೇ, ದೇವರಿಗೋಸ್ಕರ ನಾವು ಉಪವಾಸ ಮಾಡುವ ಅಗತ್ಯವಿಲ್ಲ ಎಂದು ನಾವು ತಿಳಿದುಕೊಳ್ಳಬೇಕು. ನೀವು ಶುಕ್ರವಾರ ಉಪಾವಾಸ ಮಾಡಿದರೆ ದೇವಿಯು ಖುಷಿಯಾಗುತ್ತಾಳೆ, ಸೋಮವಾರ ಮಾಡಿದರೆ ಶಿವ ಖುಷಿಯಾಗುತ್ತಾನೆ, ಆ ರೀತಿ ಏನೂ ಇಲ್ಲ. ನೀವು ಉಪವಾಸ ಮಾಡುತ್ತಿರುವುದು ಶಿವನನ್ನು ಒಲಿಸಲಿಕ್ಕಲ್ಲ ಬದಲಾಗಿ ನಿಮ್ಮ ಅರೋಗ್ಯ ಚೆನ್ನಾಗಿಡಲು ಮಾಡುತ್ತಿದ್ದೀರಿ. ನಿಮ್ಮ ದೇಹ ಶುದ್ಧಿಗಾಗಿ ಮಾಡುತ್ತಿದ್ದೀರಿ.



ವೀಡಿಯೊ:



ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar


ಕಾಮೆಂಟ್‌ಗಳು