ಪ್ರಶ್ನೆ 21: ಗುರುದೇವ್, ನನ್ನನ್ನು ಒಳ್ಳೆಯ ಮನುಷ್ಯ ಎಂದು ಗುರುತಿಸಬೇಕಾದರೆ ಯಾವ ಯಾವ ಗುಣಗಳು ನನ್ನಲ್ಲಿ ಇರಬೇಕು?



ಗುರುದೇವ್ ಶ್ರೀ ಶ್ರೀ ರವಿಶಂಕರ್:


ಸೂಕ್ಷ್ಮವನ್ನು ಕಾಣುವ ಕಣ್ಣುಗಳಿರಬೇಕು, ತಾಳ್ಮೆಯಿಂದ ಕೇಳಿಸಿಕೊಳ್ಳುವ ಕಿವಿಗಳಿರಬೇಕು, ಬುದ್ಧಿಗೆ ಯಾವುದೇ ಪೂರ್ವಾಗ್ರಹ ಅಭಿಪ್ರಾಯಗಳು ಅಂಟಿರಬಾರದು, ಅಗತ್ಯವಿರುವವರಿಗೆ ಸಹಾಯ ಹಸ್ತ ಚಾಚುವುದು, ಸಧೃಡ ಹಾಗು ಮೃದುವಾದ ಹೃದಯ. ಭಾವನಾತ್ಮಕ ವ್ಯಕ್ತಿಗಳು ತುಂಬಾ ಸಿಗುತ್ತಾರೆ, ಎಲ್ಲರ ಜೊತೆಗೂ ಸಹಾನುಬಾಳ್ವೆ ಇಂದ ಇರುತ್ತೇವೆ ಎನ್ನುತ್ತಾರೆ. ಅವರಲ್ಲಿ ಕರುಣೆ ಇರುತ್ತದೆ ಆದರೆ ಹೆಚ್ಚು ಸಾಮರ್ಥ್ಯ ಇರುವುದಿಲ್ಲ, ಟೀಕೆಗಳನ್ನು ಎದುರಿಸಲು ಅವರು ಅಸಮರ್ಥರು. ಅಂತಹ ಕರುಣೆಯಿಂದ ಹೆಚ್ಚು ಪ್ರಯೋಜನವಿಲ್ಲ. ಇದಕ್ಕೆ ವಿರುದ್ಧವಾಗಿ ಇನ್ನೂ ಕೆಲವರು ತುಂಬಾ ಒರಟು ಸ್ವಭಾವದವರಿರುತ್ತಾರೆ. ಅವರು ಗಡುಸುತನ ಪ್ರದರ್ಶಿಸುತ್ತಿರುತ್ತಾರೆ ಮತ್ತು ತುಂಬಾ ಕಠೋರವಾಗಿರುತ್ತಾರೆ, ಅದು ಒಳ್ಳೆಯ ವ್ಯಕ್ತಿತ್ವದ ಸ್ವಭಾವವಲ್ಲ.

ಒಬ್ಬ ಒಳ್ಳೆಯ ವ್ಯಕ್ತಿಗೆ, ತಲೆ ಮತ್ತು ಹೃದಯ (ಅಂದರೆ ಬುದ್ಧಿ ಮತ್ತು ಭಾವನೆ), ಇವುಗಳ ಮಧ್ಯೆ ಸರಿಯಾದ ಹೊಂದಾಣಿಕೆ ಇರುತ್ತದೆ. ಎಡ ಮೆದುಳು ಮತ್ತು ಬಲ ಮೆದುಳುಗಳ ನಡುವೆ ಸಮತೋಲನ ಇರುತ್ತದೆ.


ವೀಡಿಯೊ:




ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:

ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar



ಕಾಮೆಂಟ್‌ಗಳು