ಅಂತಃಪ್ರಜ್ಞೆಯು ಯೋಗಮಾಯೆಗಿಂತ ವಿಭಿನ್ನವಾಗಿದೆ. ಅಂತಃಪ್ರಜ್ಞೆಯೂ ಕೂಡ ಒಂದು ಸಿದ್ಧಿಯೇ. ಆದರೆ ಅವುಗಳ ನಡುವೆ ಸ್ಪಷ್ಟವಾದ ವ್ಯತ್ಯಾಸವಿದೆ. ಯೋಗಮಾಯೆಯಲ್ಲಿ ಇನ್ನೊಬ್ಬರು ಬಂದು ನಿಮಗೆ ಉಪದೇಶಿಸುತ್ತಾರೆ. ನೀವು ಯೋಗಮಾಯೆಯನ್ನು ತಪ್ಪಿಸಲು ಸಾಧ್ಯವಿಲ್ಲ.
ಯೋಗಮಾಯೆ ಕೆಟ್ಟದ್ದೇನೂ ಅಲ್ಲ. ಯೋಗಮಾಯೆಯನ್ನು ದಾಟುವ ವಿಧಾನವೆಂದರೆ, ಅದರಿಂದ ಆಗುವ ಅನುಭವಗಳನ್ನು ಪಡೆದು ಅದಕ್ಕೆ ಅಂಟದಂತಿರುವುದು; ಇದಕ್ಕೆ ನಿಮ್ಮ ಬುದ್ಧಿಯನ್ನೂ ಕೂಡ ಉಪಯೋಗಿಸಬೇಕಾಗುತ್ತದೆ. ನಮ್ಮ ಬುದ್ಧಿ ಮತ್ತು ಅಂತಃಪ್ರಜ್ಞೆ, ಇವೆರಡರ ನಡುವೆ ಒಂದು ಸಮತೋಲನವನ್ನು ಕಂಡುಕೊಳ್ಳಬೇಕು. ಎಲ್ಲಿಯವರೆಗೆ ನಿಮ್ಮ ಮನಸ್ಸು ಖಾಲಿಯಾಗಿಲ್ಲವೋ, ಬುದ್ಧಿ ಸ್ಥಿರವಾಗಿಲ್ಲವೋ ಅಲ್ಲಿಯವರೆಗೆ ನಿಮ್ಮ ಅಂತಃಪ್ರಜ್ಞೆಯು ರಾಗ ಮತ್ತು ದ್ವೇಷಗಳಿಂದ ಕವಿದಿರುತ್ತದೆ. ನೀವು ರಾಗ ಮತ್ತು ದ್ವೇಷಗಳಿಂದ ಮುಕ್ತರಾಗಿದ್ದಾರೆ ಯೋಗಮಾಯೆಯು ನಿಮಗೆ ಸಹಕಾರಿಯಾಗುತ್ತದೆ ಮತ್ತು ನಿಮಗೆ ಯಾವುದೇ ಬಾಧೆಯಾಗುವುದಿಲ್ಲ. ಆದ್ದರಿಂದಲೇ ಈ ಆಧ್ಯಾತ್ಮಿಕ ಮಾರ್ಗ ಅವಶ್ಯಕ ಮತ್ತು ಗುರು ತುಂಬಾ ಮುಖ್ಯ. ಏಕೆಂದರೆ ಗುರುವು ನಿಮಗೆ ಸರಿಯಾದ ಮಾರ್ಗ ತೋರಿಸುತ್ತಾರೆ ಮತ್ತು ಯೋಗಮಾಯೆಯನ್ನು ಅರ್ಥೈಸುತ್ತಾರೆ ಅಥವಾ ನೀವು ಹೋಗುತ್ತಿರುವ ಮಾರ್ಗದ ಬಗ್ಗೆ ಸೂಚನೆ ನೀಡುತ್ತಾರೆ. ಗುರು ಇಲ್ಲದಿದ್ದರೆ ಯೋಗಮಾಯೆಯನ್ನು ದಾಟುವುದು ತುಂಬಾ ಕಷ್ಟಸಾಧ್ಯ. ಗುರುವು ಅತ್ಯವಶ್ಯಕ.
ಭಗವಾನ್ ಕೃಷ್ಣ ಸಿದ್ಧಪುರುಷನಾಗೇ ಜನ್ಮ ತಾಳಿದ್ದರೂ ಸಹ ಅವನು ಸಾಂದೀಪನಿ ಋಷಿಗಳನ್ನು ಗುರುವಾಗಿ ಸ್ವೀಕರಿಸಿದ.
"ಮಮ ಮಾಯಾ ದುರತ್ಯಯ", ಎಂದು ಭಗವಾನ್ ಕೃಷ್ಣನು ಗೀತೆಯಲ್ಲಿ ಹೇಳಿದ್ದಾನೆ. ನನ್ನ ಮಾಯಾಶಕ್ತಿಯನ್ನು ದಾಟುವುದು ತುಂಬಾ ಕಷ್ಟ, ಅದನ್ನು ನನ್ನ ಅನುಗ್ರಹದಿಂದಲೇ ದಾಟಬೇಕು ಎಂದು ಅರ್ಜುನನಿಗೆ ಹೇಳಿದ್ದಾನೆ. ಇದೆಲ್ಲವೂ ಸ್ವಾರಸ್ಯಕರವಾಗಿದೆ. ಆದ್ದರಿಂದ ಯಾವಾಗಲೂ ಜಾಗರೂಕರಾಗಿರಬೇಕು, ಈ ಯೋಗಮಾಯೆ ಯಾವಾಗ ಬೇಕಾದರೂ ತನ್ನ ಹಿಡಿತದಲ್ಲಿ ಸಿಲುಕಿಸಬಹುದು. ಆಗ ಮನಸ್ಸು ತನ್ನ ಹತೋಟಿ ಕಳೆದುಕೊಂಡು ಒದ್ದಾಡುತ್ತದೆ. ನೀವು ಅದರಿಂದ ತಕ್ಷಣ ಹೊರಗೆ ಬಂದುಬಿಡಬೇಕು, ಅದು ಬರೀ ಅನುಗ್ರಹ ಅಥವಾ ಕೃಪೆಯಿಂದ ಮಾತ್ರ ಸಾಧ್ಯ.
ವೀಡಿಯೋ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು