ಪ್ರಶ್ನೆ 2. ನಾನು ಸರಿಯಾದ ವೃತ್ತಿಯಲ್ಲಿದ್ದೇನೆ ಎಂದು ಹೇಗೆ ತಿಳಿಯುವುದು? ಮೊದಲು ಇಷ್ಟಪಡುತ್ತಿದ್ದ ವಿಷಯದಲ್ಲಿ ನಂತರ ನಿರಾಸಕ್ತಿ ಅನುಭವಿಸುವುದು ಸಹಜವೇ? ದಯವಿಟ್ಟು ಮಾರ್ಗದರ್ಶನ ಮಾಡಿ.

 

ಗುರುದೇವ್ ಶ್ರೀ ಶ್ರೀ ರವಿಶಂಕರ್:

ಪ್ರತಿಯೊಂದು ವೃತ್ತಿಯೂ ಏರಿಳಿತಗಳನ್ನು ಹೊಂದಿದೆ ಎಂಬುದನ್ನು ನಾನು ನಿಮಗೆ ಹೇಳಲು ಬಯಸುತ್ತೇನೆ. ಕೆಲವೊಮ್ಮೆ ನಿಮ್ಮ ವೃತ್ತಿಯು ನಿಮಗೆ ಇಷ್ಟವಾಗುವುದು ಮತ್ತೆ ಕೆಲವು ಬಾರಿ ಅದು ನಿಮಗೆ ಇಷ್ಟವಾಗದೇ ಇರಬಹುದು. ನೀವು ಯಾವುದೇ ವೃತ್ತಿಯಲ್ಲಿರುವವರನ್ನು ಇದರ ಬಗ್ಗೆ ಕೇಳಿ ನೋಡಿ, ವೈದ್ಯ, ಇಂಜಿನಿಯರ್ ಅಥವಾ ರಾಜಕಾರಣಿ ಯಾರೇ ಆಗಿರಲಿ, ಯಾವುದೋ ಹಂತದಲ್ಲಿ ಅವರೂ ಸಹ ತಮ್ಮ ವೃತ್ತಿಜೀವನದಲ್ಲಿ ನಿರಾಶೆ ಅನುಭವಿಸಿರುತ್ತಾರೆ. ಅವರೂ ಕೆಲವೊಮ್ಮೆ ಹತಾಶರಾಗಿ ವೃತ್ತಿಯನ್ನು ತ್ಯಜಿಸಬೇಕೆಂದು ಭಾವಿಸುತ್ತಾರೆ. ಯಾಕೆ ಈ ರೀತಿ ಆಗುತ್ತದೆ? ಏಕೆಂದರೆ ನೀವು ಆಯಾಸದಿಂದ ದಣಿದಿರುವ ಕಾರಣ. ಆಯಾಸವೇಕಾಗುತ್ತದೆ? ಏಕೆಂದರೆ ನಿಮ್ಮೊಳಗಿನ ಆಳವಾದ ಇನ್ನೊಂದು ಆಯಾಮದ ಪರಿಚಯ ನಿಮಗಿನ್ನೂ ಅಗಿಲ್ಲದಿರುವ ಕಾರಣ.

ನೀವು ವರ್ಷದಲ್ಲಿ 2 ಅಥವಾ 3 ಬಾರಿ ಕೆಲವು ದಿನಗಳನ್ನು ಉನ್ನತ ಧ್ಯಾನ ಶಿಬಿರಕ್ಕೆ ಮೀಸಲಿಟ್ಟು, ಮೌನದಲ್ಲಿ ಹಾಗು ಧ್ಯಾನದಲ್ಲಿ ಸಮಯವನ್ನು ಕಳೆದರೆ, ನಿಮ್ಮಲ್ಲಿ ಮತ್ತೆ ಉತ್ಸಾಹ ಪುನರುಜ್ಜರಿಸುತ್ತದೆ.

ನಂತರ ನೀವು ಯಾವುದೇ ಕೆಲಸವನ್ನು ಮಾಡಿದರೂ ಪೂರ್ಣ ಜವಾಬ್ದಾರಿಯಿಂದ, ಉತ್ಸಾಹದಿಂದ ಮತ್ತು ಅರಿವಿನಿಂದ ಮಾಡುತ್ತೀರಿ. ನಿಮ್ಮ ಚೈತನ್ಯವನ್ನು ನೀವು ಪುನರುಜ್ಜೀವನಗೊಳಿಸಬೇಕೆಂದರೆ, ಅದು ಕೇವಲ ಧ್ಯಾನದಿಂದ ಮಾತ್ರ ಸಾಧ್ಯ.

ಅನೇಕ ವೃತ್ತಿ ಮಾರ್ಗಗಳಲ್ಲಿ ಯಾವುದನ್ನು ಆರಿಸಿಕೊಳ್ಳುವುದು ಎಂಬ ಗೊಂದಲವಿದೆಯೇ? ಈ ವೀಡಿಯೊ ನೋಡಿ:



ಕಾಮೆಂಟ್‌ಗಳು