ಅಹಂಭಾವವಿದ್ದರೆ ಅಲ್ಲಿ ಘರ್ಷಣೆ ಇರುತ್ತದೆ, ಬೇರೆ ಮಾರ್ಗವಿಲ್ಲ. ನೀವು ಜ್ಞಾನದಲ್ಲಿ ಸ್ಥಿರವಾಗಿದ್ದರೆ ಈ ಸಣ್ಣ ವರ್ತನೆ, ಗಲಾಟೆ ಮತ್ತು ಚಿಕ್ಕ ಚಿಕ್ಕಅಭಿಪ್ರಾಯಗಳಿಂದ ಮೇಲೆ ಏಳುತ್ತೀರಿ.
ನೀವು ಯಾವಾಗಲೂ ಬೇರೆ ಜನರ ಬಗ್ಗೆ ಅಭಿಪ್ರಾಯಗಳನ್ನು ಮಾಡುತ್ತಿರುತ್ತೀರಿ. ಸ್ವಲ್ಪ ಹಿಂತಿರುಗಿ ನೋಡಿದರೆ ಗೊತ್ತಾಗುತ್ತದೆ, ನಾವು ಮಾಡಿರುವ 80 ರಿಂದ 90 ಪ್ರತಿಶತ ಅಭಿಪ್ರಾಯಗಳು ತಪ್ಪಾಗಿದ್ದವು ಎಂದು. ಕೆಲವೊಮ್ಮೆ ಜನರು ಫೋನಿನಲ್ಲಿ ಸಂದೇಶಗಳನ್ನು ಕಳುಹಿಸುತ್ತಾರೆ, ಅದನ್ನು ಇನ್ನೊಂದು ವ್ಯಕ್ತಿ ಓದುವ ಮೊದಲೇ ಹಿಂತೆಗೆದುಕೊಳ್ಳುತ್ತಾರೆ ಅಥವಾ ಅಳಿಸಿ ಹಾಕುತ್ತಾರೆ. ನಿಮ್ಮಲ್ಲಿ ಎಷ್ಟು ಮಂದಿ ಈ ರೀತಿ ಮಾಡಿದ್ದೀರಿ? ಯಾರಿಗಾದರೂ ಕಳುಹಿಸಲು ನೀವು ಸಂದೇಶವನ್ನು ಟೈಪ್ ಮಾಡಿ ನಂತರ ಇದು ಸರಿಯಿಲ್ಲ ಎಂದು ನಿಮಗೆ ಅನ್ನಿಸುತ್ತದೆ, ಆದ್ದರಿಂದ ನೀವು ಸಂದೇಶವನ್ನು ಹಿಂತೆಗೆದುಕೊಳ್ಳುತ್ತೀರಿ. ನಿಮ್ಮಲ್ಲಿ ಎಷ್ಟು ಮಂದಿಗೆ ಈ ರೀತಿ ಆಗಿದೆ? ನಿಮ್ಮ ಅಭಿಪ್ರಾಯಗಳಲ್ಲೇ ಎಷ್ಟು ದೋಷಗಳಿವೆ ಎಂಬುದನ್ನು ಇದು ತೋರಿಸುತ್ತದೆ.
ಯಾವುದು ಸತ್ಯಕ್ಕೆ ಹತ್ತಿರವಲ್ಲವೋ ಅದರಲ್ಲೇ ನಾವು ಸಿಲುಕಿ ಮನಸ್ಸಿನ ಮೇಲೆ ಮೋಡಗಳನ್ನು ನಿರ್ಮಿಸಿಕೊಂಡುಬಿಡುತ್ತೇವೆ. ಈ ರೀತಿ ನೀವು ಹಿಂದೆ ಕೂಡ ಹಲವು ಬಾರಿ ಸಿಲುಕಿದ್ದೀರಿ, ಜನರ ವಿರುದ್ಧ ದ್ವೇಷವನ್ನು ಸಾಧಿಸಿದ್ದೀರಿ ಮತ್ತು ಜನರ ಬಗ್ಗೆ ಅಭಿಪ್ರಾಯಗಳನ್ನು ಹೊಂದಿದ್ದೀರಿ. ನೀವು ಪದೇ ಪದೇ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತೀರಿ. ಇದರಿಂದ ನೀವು ಎಚ್ಚೆತ್ತುಕೊಳ್ಳಬೇಕು. ನಿಮಗೆ ತಿಳಿದಿರಲಿ, ನಿಮ್ಮ ಸಮಯ ಉತ್ತಮವಾಗಿದ್ದರೆ, ನಿಮ್ಮ ಕೆಟ್ಟ ಶತ್ರು ಕೂಡ ಸ್ನೇಹಿತನಂತೆ ವರ್ತಿಸುತ್ತಾನೆ ಮತ್ತು ನಿಮ್ಮ ಸಮಯ ಕೆಟ್ಟದಾಗಿದ್ದರೆ ನಿಮ್ಮ ಹತ್ತಿರದ ಸ್ನೇಹಿತ ಕೂಡ ಶತ್ರುವಿನಂತೆ ವರ್ತಿಸುತ್ತಾನೆ. ನೀವು ಅನುಭವಿಸುವ ಪರಿಸ್ಥಿತಿಗೆ ನಿಮ್ಮ ಕರ್ಮಗಳೇ ಕಾರಣವಾಗಿವೆ. ನಿಮ್ಮ ಮನಸ್ಸನ್ನು, ಬೇರೆಯವರನ್ನು ವಿಮರ್ಶೆಯನ್ನು ಮಾಡುವ ಬದಲು, ನಿಮ್ಮೊಳಗೆ ತೆಗೆದುಕೊಂಡು ಬನ್ನಿ.
ಯಾರು ಬೇರೆಯವರ ಅಹಂಕಾರದ ಬಗ್ಗೆ ದೂರುತ್ತಾರೋ ಅವರಲ್ಲಿ ಅದಕ್ಕಿಂತ ಹೆಚ್ಚಿನ ಅಹಂಕಾರ ಇರುತ್ತದೆ. ಯಾರು ಬೇರೆಯವರ ಒರಟುತನವನ್ನು ತೋರಿಸಲು ಪ್ರಯತ್ನಪಡುತ್ತಾರೋ ಅವರಲ್ಲೇ ಎಲ್ಲೋ ಒಳಗೆ ನಾವು ಒರಟುತನವನ್ನು ಕಾಣಬಹುದು. ನಿಮ್ಮನ್ನು ನೀವೇ ಪ್ರತಿಬಿಂಬಿಸಿಕೊಳ್ಳಿ. ನೋಡೀ, ನೀವು ಬೇರೆಯವರನ್ನು ಸರಿಪಡಿಸಲಾಗುವುದಿಲ್ಲ, ಆದರೆ ಬೇರೆಯವರು ನಿಮ್ಮನ್ನು ನೀವು ಸರಿಪಡಿಸಿಕೊಳ್ಳಲು ಅವಕಾಶ ಕೊಡುತ್ತಾರೆ.
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು