ಅಂತಿಮ ತತ್ವ ಏನೆಂದರೆ ಇಡೀ ಪ್ರಪಂಚ ಅಣುಗಳಿಂದ ಮಾಡಲ್ಪಟ್ಟಿದೆ. ಇದನ್ನು ಗಣ (ಸಮೂಹ) ಎಂದು ಕರೆಯುತ್ತಾರೆ. ನಮ್ಮ ದೇಹವೂ ಕೂಡ ಒಂದು ಗಣವೇ. ಇದು ಮಾಂಸ, ರಕ್ತ ಮತ್ತು ಮಜ್ಜೆಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಎಲ್ಲ ಗಣಗಳಿಗೂ ಅಧಿಪತಿ 'ಗಣೇಶ'.
ಗಣೇಶನು ಅಚಿಂತ್ಯ, ಅವ್ಯಕ್ತ ಹಾಗು ಅನಂತನಾಗಿದ್ದಾನೆ. ಅಂದರೆ ಅವನು ವಿಚಾರಗಳನ್ನು, ಅಭಿವ್ಯಕ್ತಿಗಳನ್ನು ಮೀರಿದ ಸ್ವಭಾವವುಳ್ಳವನು ಮತ್ತು ಅವನು ಅನಂತನಾದವನು. ಆದ್ದರಿಂದ ಅವನಿಗಿಂತ ಸುಂದರವಾದದ್ದು ಬೇರೊಂದಿಲ್ಲ ಮತ್ತು ಅವನು ಎಲ್ಲೆಡೆ ವ್ಯಾಪಿಸಿದ್ದಾನೆ. ಒಂದು ಪ್ರಶ್ನೆ ಬರಬಹುದು, ಈ ಒಂದೇ ಆತ್ಮಸ್ವರೂಪಿ ಆದ ಪರಮಾರ್ಥ ತತ್ವವನ್ನು ಯಾಕಾಗಿ ಆನೆಯ ರೂಪದಲ್ಲಿ ಚಿತ್ರಿಸಲಾಗಿದೆ ಎಂದು? ಆನೆಗೆ ಕೆಲವು ವಿಶಿಷ್ಟ ಗುಣಗಳಿವೆ, ಉದಾ - ಗಂಭೀರತೆ ಹಾಗು ನಿರ್ಭೀತಿ. ಆನೆ ಅದರ ದಾರಿಯಲ್ಲಿ ಏನೇ ಅಡಚಣೆ ಬಂದರೂ ಅದನ್ನು ಲೆಕ್ಕಿಸದೆ ನಡೆಯುತ್ತದೆ. ಆನೆಯು ಅಧಿಕಾರ, ಸಹಿಷ್ಣುತೆ, ಶಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ಆದ್ದರಿಂದ, ನಮ್ಮಲ್ಲೂ ಇದೇ ರೀತಿಯ ಗುಣಗಳನ್ನು ಅಳವಡಿಸಿಕೊಳ್ಳಲು ಸಹಾಯವಾಗುತ್ತದೆ.
ಅದರ ಉದ್ದವಾದ ಸೊಂಡಿಲು, ಜ್ಞಾನ ಮತ್ತು ಜ್ಞಾನದ ಅನುಷ್ಠಾನದ (ಕ್ರಿಯೆ) ಮಧ್ಯೆ ಸಂಬಂಧವನ್ನು ಸೂಚಿಸುತ್ತದೆ. ಗಣೇಶನಿಗೆ ಒಂದೇ ಒಂದು ದಂತವಿದೆ, ಎಲ್ಲೆಡೆ ಇರುವುದು ಒಂದೇ ಆತ್ಮವೆಂದು ಅದು ಸೂಚಿಸುತ್ತದೆ.
ನಮ್ಮನ್ನು ಒಂದು ಪ್ರಶ್ನೆ ಕಾಡಿರಬಹುದು, ಏಕೆ ದೊಡ್ಡ ಗಣೇಶ ಅತೀ ಚಿಕ್ಕ ಪ್ರಾಣಿಯಾದ ಇಲಿಯ ಮೇಲೆ ಕುಳಿತಿದ್ದಾನೆ ಎಂದು? ಇಲಿ ಯು ತರ್ಕದ ಪ್ರತೀಕ ಹಾಗು ಜ್ಞಾನವು ಹೌದು. ಅದರ ಮೇಲೆ ಕುಳಿತಿರುವುದು 'ಸರ್ವೋಚ್ಚ ಜ್ಞಾನ'ವಾದ ಗಣೇಶ. ಗಣೇಶನ ಕೈಯಲ್ಲಿರುವ ಮೋದಕವು ಅಂತಿಮ ಆನಂದದ ಅನುಭೂತಿಯನ್ನು ಸೂಚಿಸುತ್ತದೆ. ಒಂದು ಕೈಯಲ್ಲಿ ತನ್ನನ್ನು ನಂಬಿದ ಭಕ್ತರಿಗಾಗಿ ಆಶೀರ್ವಾದ ಮುದ್ರೆ. ಒಂದು ಕೈಯಲ್ಲಿ ಪಾಶವಿದೆ, ಅದು ಶಿಸ್ತಿನ ಸೂಚಕ ಮತ್ತು ಇನ್ನೊಂದು ಕೈಯಲ್ಲಿ ಅಂಕುಶ, ಅದು ಸ್ವಯಂ ನಿಯಂತ್ರಣದ ಸೂಚಕ. ಗಣೇಶನ ಹೊಟ್ಟೆ ತುಂಬಾ ದೊಡ್ಡದು ಮತ್ತು ಅದಕ್ಕೆ ಹಾವು ಸುತ್ತಿದೆ. ಇದು ಪ್ರಜ್ಞಾಪೂರ್ವಕವಾದ ಸ್ವೀಕಾರವನ್ನು ಸೂಚಿಸುತ್ತದೆ. ನಮ್ಮೆಲ್ಲ ದುಗುಡ ದುಮ್ಮಾನಗಳನ್ನು ಗಣೇಶನಿಗೆ ಗರಿಕೆ/ ದುರ್ವಾ ಹುಲ್ಲಿನ ಮುಖೇನ ಸಮರ್ಪಿಸುತ್ತೇವೆ. ಗಣೇಶ ಹುಟ್ಟಿದ ಕಥೆ ನಮಗೆಲ್ಲರಿಗೂ ಗೊತ್ತೇ ಇದೆ. ಗಣೇಶನು ತನ್ನ ಅಮ್ಮ ಪಾರ್ವತಿಯ ದೇಹದ ಕೊಳೆಯಿಂದ ಜನಿಸಿದನು. ಪಾರ್ವತಿಯು ಅತೀ ಉತ್ಸಾಹದ ಸಂಕೇತ. ಎಲ್ಲಾ ಹಬ್ಬ, ಮದುವೆ ಅಥವಾ ಸಮಾರಂಭಗಳಲ್ಲಿ ಹೆಚ್ಚು ಉತ್ಸಾಹ ಇರುತ್ತದೆ. ಆ ಉತ್ಸಾಹದ ಜೊತೆ ಸ್ವಲ್ಪ ಕೊಳೆ ಕೂಡ ಸೇರಿರುತ್ತದೆ. ಯಾವುದೇ ಸಮಾರಂಭ ಮುಗಿದ ಕೂಡಲೇ ಏನಾದರೂ ಜಗಳ ಅಥವಾ ಸುಸ್ತು ಇದ್ದೇ ಇರುತ್ತದೆ. ಯಾವಾಗ ಈ ಕೊಳೆಯಿಂದ ಮಾಡಲ್ಪಟ್ಟ ದೇಹ ಅದ್ವೈತ ತತ್ವವಾದ ಶಿವನನ್ನು ಸೇರುತ್ತದೆಯೋ ಆಗ ಅದರ ತಲೆ ಹೋಗುತ್ತದೆ, ಅಂದರೆ ಅಹಂಕಾರ ಹೋಯಿತು ಎಂದು. ನಂತರ ಅದಕ್ಕೆ ಆನೆಯ ತಲೆಯನ್ನು ಕೂರಿಸಲಾಯಿತು. ಯಾವುದೇ ಹೊಸ ಕೆಲಸಕ್ಕೆ ಮುಂಚೆ ಎಲ್ಲೆಡೆ ಗಣೇಶನನ್ನು ಪೂಜಿಸಲಾಗುತ್ತದೆ ಎಂಬ ಆಶೀರ್ವಾದವನ್ನು ಶಿವನೇ ಗಣೇಶನಿಗೆ ಕರುಣಿಸಿದನು.
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar

ಕಾಮೆಂಟ್‌ಗಳು