ಪ್ರಶ್ನೆ 16: ಅನುವಂಶಿಕ ಡಿಎನ್ಎ, ಆಧ್ಯಾತ್ಮಿಕತೆ, ದಿನನಿತ್ಯದ ಸಾಧನೆ ಮತ್ತು ಸಾಕ್ಷಾತ್ಕಾರ, ಇವುಗಳ ನಡುವಿನ ಸಂಬಂಧವೇನು? | ಗುರುದೇವ್ ಶ್ರೀ ಶ್ರೀ ರವಿಶಂಕರ್
ಹೌದು, ವಸ್ತು ಮತ್ತು ಚೇತನ ನಡುವಿನ ಸಂಪರ್ಕವು ತುಂಬಾ ಪ್ರಬಲವಾದುದು, ತುಂಬಾ ಹತ್ತಿರ ಮತ್ತು ಬಹಳ ಆಳವಾಗಿದೆ. ನಿಮಗೆ ಒಬ್ಬರ ಬಗ್ಗೆ ತಿಳಿದಿರಬಹುದು, ಡಾ.ಫ್ಯಾರಿ ಎಂದು, ಅವರು ಡಿಎನ್‌ಎ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಓಸ್ಲೋ ವಿಶ್ವವಿದ್ಯಾಲಯದಲ್ಲಿ ಡಾ.ಫ್ಯಾರಿ ಅವರು ಡಿಎನ್‌ಎ ಮೇಲೆ ಸುದರ್ಶನ ಕ್ರಿಯೆಯಿಂದಾಗುವ ಪರಿಣಾಮದ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆ . ಅವರು ಕೆಲವು ಆಸಕ್ತಿದಾಯಕ ಫಲಿತಾಂಶಗಳನ್ನು ಕಂಡುಕೊಂಡಿದ್ದಾರೆ. ಅವರು ಹೇಳುವುದೇನೆಂದರೆ, ಕೆಲವು ಗಂಭೀರ ಕಾಯಿಲೆಗಳಿಗೆ ಅಥವಾ ಕ್ಯಾನ್ಸರ್ ಗೆ ಕಾರಣವಾಗಬಲ್ಲ 300 ರಷ್ಟು ವರ್ಣತಂತು (ಜೀನ್) ಗಳು ದೇಹದಲ್ಲಿ ಇವೆ. ಪ್ರಾಣಾಯಾಮ ಮತ್ತು ಸುದರ್ಶನ ಕ್ರಿಯೆ ಈ ವರ್ಣತಂತುಗಳನ್ನು ಪರಿಣಾಮಕರವಾಗಿ ನಿಗ್ರಹಿಸುವುದನ್ನು ಕಂಡುಕೊಂಡಿದ್ದಾರೆ. ವರ್ಣತಂತುಗಳು ಕ್ರಿಯೆಯ ಅಭ್ಯಾಸದಿಂದ ನಿಷ್ಕ್ರಿಯವಾಗುತ್ತವೆ. ಸುದರ್ಶನ ಕ್ರಿಯೆ ಪಡೆದ ಅನೇಕ ಜನರಲ್ಲಿ ಕಾಯಿಲೆಯ ಪರಿಣಾಮ ಸಂಭವಿಸದಿರಲು ಇದು ಒಂದು ಕಾರಣವಾಗಿದೆ. ಅದನ್ನೇ ಡಾ.ಫ್ಯಾರಿಯವರು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:
ಇಂಸ್ಟಾಗ್ರಾಮ್: https://www.instagram.com/srisriravishankar
ಯೂಟೂಬ್: https://www.youtube.com/SriSri
ಟ್ವಿಟ್ಟೆರ್: http://twitter.com/SriSri
ಫೇಸ್ಬುಕ್: http://facebook.com/SriSriRaviShankar
ಬ್ಲಾಗ್: http://wisdom.srisriravishankar.org/
ಲಿಂಕ್ಡ್ ಇನ್: https://in.linkedin.com/in/srisriravishankar
ವೀಡಿಯೋ ಇಲ್ಲಿ ನೋಡಿ:

ಕಾಮೆಂಟ್‌ಗಳು