ಪ್ರಶ್ನೆ 15: ಈ ಒತ್ತಡವಾದ ನಮ್ಮ ದೈನಂದಿನ ಜೀವನದಲ್ಲಿ ಸ್ವಾತಂತ್ರ್ಯ ಮತ್ತು ಮನಸ್ಸಿನ ಶಾಂತಿಯನ್ನು ಹೇಗೆ ಕಂಡುಕೊಳ್ಳುವುದು? ನನ್ನ ಕರ್ತವ್ಯಗಳು ಮತ್ತು ಜವಾಬ್ದಾರಿಗಳಲ್ಲೇ ನಾನು ತುಂಬಾ ಮುಳುಗಿರುತ್ತೇನೆ | ಗುರುದೇವ್ ಶ್ರೀ ಶ್ರೀ ರವಿಶಂಕರ್

 

ಗುರುದೇವ್ ಶ್ರೀ ಶ್ರೀ ರವಿಶಂಕರ್:


ಅದು ಒಳ್ಳೆಯದು. ಅದು ದೈನಂದಿನ ಜೀವನದಲ್ಲಿ ವ್ಯತಿರಿಕ್ತವಾಗಿದೆ. ನಿಮ್ಮ ಕೆಲಸದಿಂದ ನೀವು ಮನೆಗೆ ಹಿಂತಿರುಗಿದಾಗ, ಪ್ರತಿದಿನ ಕೆಲವು ನಿಮಿಷಗಳ ಕಾಲ ವಿಶ್ರಾಂತಿಯನ್ನು ಪಡೆಯಿರಿ ಮತ್ತು ಧ್ಯಾನ ಮಾಡಿ.


ನಾವು ಹಲ್ಲನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೋ, ಹಾಗೆಯೇ ಧ್ಯಾನವು ನಿಮ್ಮ ಮನಸ್ಸನ್ನು ಶುಚಿಯಾಗಿಡಲು ಸಹಾಯ ಮಾಡುತ್ತದೆ. ದಿನನಿತ್ಯ ನಿರಂತರವಾಗಿ ಜ್ಞಾನವನ್ನು ಕೇಳಿ. ಅದಕ್ಕಾಗಿಯೇ ನಾವು ಅನೇಕ ಜ್ಞಾನದ ಮಾತುಗಳನ್ನು ನೀಡಿದ್ದೇವೆ. ಸುಮಾರು ಏಳು ವರ್ಷಗಳ ಕಾಲ ಪ್ರತಿ ಬುಧವಾರ ನಾವು ಕೆಲವು ಜ್ಞಾನದ ನುಡಿಗಳನ್ನು ನೀಡುತ್ತಿದ್ದೆವು, ಅವುಗಳನ್ನು ‘’ಆತ್ಮೀಯರಿಗೊಂದು ಕಿವಿಮಾತು ‘’ ಎಂಬ ಪುಸ್ತಕದಲ್ಲಿ ಸಂಗ್ರಹಿಸಲಾಗಿದೆ.  ಅದರಿಂದ ಕೆಲವು ಜ್ಞಾನದ ಹಾಳೆಗಳನ್ನು ತೆಗೆದು ಓದಿ ಅಥವಾ ಸ್ವಲ್ಪ ಜ್ಞಾನದ ಮಾತುಗಳನ್ನು ಕೇಳಿ.


ನೀವು ತುಂಬಾ ಕಾರ್ಯನಿರತವಾಗಿದ್ದಾಗ ಅಥವಾ ಸಾಕಷ್ಟು ಜವಾಬ್ದಾರಿಗಳಿದ್ದಾಗ, ನಿಮಗೆ ಧ್ಯಾನವು ಹೆಚ್ಚು ಉಪಯೋಗಕಾರಿ. ನಿಮಗೆ ಮಾಡಲು ಏನೂ ಇಲ್ಲದಿದ್ದರೆ ಧ್ಯಾನದ ಅವಶ್ಯಕತೆ ಏನಿದೆ? ಆಗ ನಿಮಗೆ ಶಕ್ತಿ ಏಕೆ ಬೇಕು? ನಿಮಗೆ ಶಕ್ತಿ ಮತ್ತು ಬುದ್ಧಿವಂತಿಕೆ, ಅವುಗಳ ಅವಶ್ಯಕತೆ ಇದ್ದಾಗ ಮಾತ್ರ ಬೇಕು. ನಿಮಗೆ ಏನೂ ಇಲ್ಲದಿದ್ದರೆ, ಸಾಕಷ್ಟು ಬುದ್ಧಿವಂತಿಕೆಯ ಅವಶ್ಯಕತೆ ಏನು?


ಈ ಪೋಸ್ಟ್ ಗೆ ಸಂಬಂಧಿಸಿದ ವೀಡಿಯೋ ಈ ಅಂಕಣದ ಕೊನೆಯಲ್ಲಿದೆ:


ಸಾಮಾಜಿಕ ಜಾಲತಾಣಗಳಲ್ಲಿ ಗುರುದೇವ್ ಶ್ರೀ ಶ್ರೀ ರವಿಶಂಕರ್ ಅವರನ್ನು ಅನುಸರಿಸಿ:


ಇಂಸ್ಟಾಗ್ರಾಮ್: https://www.instagram.com/srisriravishankar

ಯೂಟೂಬ್: https://www.youtube.com/SriSri

ಟ್ವಿಟ್ಟೆರ್: http://twitter.com/SriSri

ಫೇಸ್ಬುಕ್: http://facebook.com/SriSriRaviShankar

ಬ್ಲಾಗ್: http://wisdom.srisriravishankar.org/

ಲಿಂಕ್ಡ್ ಇನ್: https://in.linkedin.com/in/srisriravishankar


ವೀಡಿಯೊ :




ಕಾಮೆಂಟ್‌ಗಳು