ಪ್ರಶ್ನೆ 13: ಒಬ್ಬರು ಹೇಗೆ ಉತ್ತಮ ನಾಯಕರಾಗಬಹುದು? ಗುರುದೇವ್ ಶ್ರೀ ಶ್ರೀ ರವಿಶಂಕರ್


 ಗುರುದೇವ್ ಶ್ರೀ ಶ್ರೀ ರವಿಶಂಕರ್:


ಮೊದಲು ಉತ್ತಮ ಅನುಯಾಯಿಗಳಾಗಿ. ನೀವು ಉತ್ತಮ ಶಿಕ್ಷಕರಾಗಬೇಕಾದರೆ, ಮೊದಲು ನೀವು ಉತ್ತಮ ವಿದ್ಯಾರ್ಥಿಯಾಗಬೇಕು. ನೀವು ಉತ್ತಮ ಉದ್ಯಮಿಯಾಗಲು ಬಯಸಿದರೆ, ಮೊದಲು ನೀವು ಉತ್ತಮ ಗ್ರಾಹಕರಾಗಲು ಕಲಿಯಬೇಕು. ಆಗ ನಿಮಗೆ ಗ್ರಾಹಕರ ಅವಶ್ಯಕತೆಗಳು ತಿಳಿಯುತ್ತದೆ ಮತ್ತು ಗ್ರಾಹಕರನ್ನು ಹೇಗೆ ಪರಿಗಣಿಸಬೇಕು ಎಂದು ತಿಳಿಯುತ್ತದೆ. ಒಬ್ಬ ಒಳ್ಳೆಯ ನಾಯಕ ತನ್ನ ನಾಯಕತ್ವವನ್ನು ಎಂದಿಗೂ ಬೇರೆಯವರ ಮೇಲೆ ಹೇರುವುದಿಲ್ಲ. ಕೇವಲ ದಾರಿಯನ್ನು  ಸುಗಮಗೊಳಿಸುವುದಷ್ಟೇ ನನ್ನ ಕೆಲಸ ಎಂದು ನಾಯಕರಾದವರು ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳಬೇಕು. ಒಬ್ಬ ಒಳ್ಳೆಯ ನಾಯಕನಾದವನು ಹಿಂದೆ ನಿಂತು ಎಲ್ಲರನ್ನೂ ಮುಂದೆ ಹೋಗಲು ಅನುವು ಮಾಡಿಕೊಡುತ್ತಾನೆ. ನಾಯಕನು ಹಿಂದಿನಿಂದ ಎಲ್ಲರನ್ನೂ ಮುನ್ನಡೆಸುವವನು.


ನಾಯಕರಲ್ಲಿ ಎರಡು ವಿಧಗಳಿವೆ:


1. ತಾವು ಮುನ್ನಡೆದು ಇತರರು ತಮ್ಮನ್ನು ಹಿಂಬಾಲಿಸುವಂತೆ ನೋಡಿಕೊಳ್ಳುವವರು.

2. ತಾವು ಪ್ರಾರಂಭಿಸಿ ಉಳಿದವರೆಲ್ಲರೂ ಮುಂದೆ ನಡೆಯಲು ಅವಕಾಶ ಮಾಡಿಕೊಟ್ಟು ತಾವು ಕೊನೆಯಲ್ಲಿ

ಹೋಗುವವರು.


ಎರಡನೆಯದು ಉತ್ತಮ ಎಂಬುದು ನಮ್ಮ ಅಭಿಪ್ರಾಯ. ಅವರು ಹೆಚ್ಚು ಸಹಾನುಭೂತಿ ಹೊಂದಿರುತ್ತಾರೆ. ಅಂತಹ ನಾಯಕರಿಗೆ ಎಲ್ಲರೂ ಆಗಮಿಸಿ ಮುಂದೆ ನಡೆದಿರುವುದು ತಿಳಿಯುತ್ತದೆ. ಅಲ್ಲದೆ, ನೀವು ನಾಯಕರಾಗಿ ನೀವು ಮುಂಭಾಗದಲ್ಲಿಯೇ ನಡೆಯುತ್ತಿದ್ದರೆ ಜನರು ನಿಮ್ಮ ಹಿಂದೆ ಬರುತ್ತಾರೋ ಇಲ್ಲವೋ ಎಂಬುದು ನಿಮಗೆ ಹೇಗೆ ತಿಳಿಯುತ್ತದೆ? ನಿಮ್ಮ ಹಿಂದೆ ಬರುವಾಗ ಕೆಲವರು  ನಡೆಯುವುದನ್ನು ಕೈಬಿಟ್ಟಿರಬಹುದು. ಆದ್ದರಿಂದ ನಾಯಕನಾಗಿ ಎಲ್ಲರೂ ಮುಂದೆ ಸಾಗುವಂತೆ ನೋಡಿಕೊಳ್ಳಬೇಕು.



ವೀಡಿಯೊ:




ಕಾಮೆಂಟ್‌ಗಳು