ಪ್ರಶ್ನೆ 12: ನೀವು ಒಂಟಿಯಾಗಿರುವಾಗಲೂ ಹೇಗೆ ಸಂತೋಷವಾಗಿರಬಹುದು? | ಗುರುದೇವ್ ಶ್ರೀ ಶ್ರೀ ರವಿಶಂಕರ್ ರವರಿಂದ ಉತ್ತರ


ಗುರುದೇವ್ ಶ್ರೀ ಶ್ರೀ ರವಿಶಂಕರ್:

ನೀವು ಸ್ವಾತಂತ್ರ್ಯವನ್ನು ಅನುಭವಿಸಿ! (ಪ್ರೇಕ್ಷಕರಿಂದ ನಗು) ಪಕ್ಷಿಗಳನ್ನು ಹಾರುವುದನ್ನು ನೋಡಿ.

ಒಂಟಿತನ ಎಂದರೇನು? ನಿಮ್ಮನ್ನು ಕಾಡಲು ಯಾರೂ ಇಲ್ಲದಿದ್ದಾಗ, ನೀವು ಎಲ್ಲಿಗೆ ಹೋಗಿದ್ದೀರಿ ಎಂದು ಯಾರೂ ಕೇಳಲು ಇಲ್ಲದಿದ್ದಾಗ, ನೀನು ಏನು ಮಾಡಿದೆ? ನೀವು ಯಾರನ್ನು ನೋಡಿದ್ದೀರಿ? ಎಂದು ಯಾರೂ ನಿಮ್ಮ ಮೇಲೆ  ನಿಯಂತ್ರಣ ಹಾಕದಿದ್ದಾಗ, ಯಾವುದೇ ನಿರ್ಬಂಧ ಏನೂ ಇರುವುದಿಲ್ಲ! ಆಗ ನೀವು ಸ್ವತಂತ್ರವಾದ ಪಕ್ಷಿಯಂತೆ. ಆಗ ಹಕ್ಕಿಯಂತೆ ಜಿಗಿಯಿರಿ, ಯಾವುದಾದರೂ ಸಂಗೀತವನ್ನು ಹಾಕಿಕೊಂಡು ಕುಣಿಯುವ ಮನಸ್ಸಾಗುತ್ತದೆ, ಅದನ್ನು ಮಾಡಿ.

ಒಂಟಿತನ ಎಂದರೇನು? ನಿಮ್ಮ ಒಂಟಿತನವನ್ನು ನಿಮ್ಮಿಂದ ದೂರ ಮಾಡದಿರುವ ಸಂಗಾತಿ ನಿಮಗೆ ಸಿಕ್ಕಿರುವುದು, ಎಚ್ಚೆತ್ತು ನೋಡಿ! ಲಕ್ಷಾಂತರ ಜನರು ಅವರೇ ಪ್ರೀತಿಸಿದ, ಅವರಿಗೇ ಇಷ್ಟವಾಗುವ ಸಂಗಾತಿಯನ್ನೇ ಆರಿಸಿಕೊಂಡು ಮದುವೆಯಾಗಿದ್ದಾರೆ. ಅಂತವರನ್ನೂ ಕೂಡ ಒಂಟಿತನ ಕಾಡಿರುತ್ತದೆ! ಹಲವು ಮಂದಿ ಇದರ ಬಗ್ಗೆ ಮುಕ್ತವಾಗಿ ಹಂಚಿಕೊಳ್ಳದಿರಬಹುದು, ಆದರೆ ಪ್ರಾಮಾಣಿಕವಾದ ಆದರ್ಶ ದಂಪತಿಗಳನ್ನು ಕೇಳಿ, "ನೀವು ಯಾವಾಗಲಾದರೂ ಒಂಟಿತನ ಅನುಭವಿಸಿದ್ದೀರಾ ಎಂದು?" ಅವರು ಹೌದು ಎಂದು ಒಪ್ಪಿಕೊಳ್ಳುತ್ತಾರೆ.

ಯಾರು ತಮ್ಮ ಆತ್ಮದ ಜೊತೆಗೆ ಸಂಬಂಧವನ್ನು ಹೊಂದಿರುತ್ತಾರೋ ಅವರಿಗೆ ಒಂಟಿತನ ಬಾಧಿಸುವುದಿಲ್ಲ. ತಮ್ಮ ಆತ್ಮದಲ್ಲೇ ಸ್ಥಿರವಾದವರು ಒಂಟಿತನವನ್ನು ಅನುಭವಿಸುವುದಿಲ್ಲ. ಆಧ್ಯಾತ್ಮಿಕ ಉನ್ನತಿ ಮಾತ್ರ ಒಂಟಿತನವನ್ನು ದೂರಮಾಡಬಲ್ಲದು, ಪ್ರಾಣಸಂಗಾತಿಗಳಲ್ಲ.


ವೀಡಿಯೊ:



ಕಾಮೆಂಟ್‌ಗಳು