ಪ್ರಶ್ನೆ 11: ಗುರೂಜಿ, ಒಬ್ಬರು ಮದುವೆಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ. ಆದರೆ ಒಬ್ಬರಿಗೆ ಮದುವೆಯಾಗಿಯೂ ಕೂಡ ಜ್ಞಾನೋದಯ ಆಗಬಹುದೇ?
ಒಬ್ಬರು ಮದುವೆಯಾಗಿ ಸಂತೋಷವಾಗಿರಲು ಸಾಧ್ಯವಿಲ್ಲ ಎಂದು ನೀವೇಕೆ ಭಾವಿಸುತ್ತೀರಿ? ನೀವು ಏಕೆ ಮದುವೆಯಾಗಿಯೂ ಸಂತೋಷವಾಗಿರಲು ಸಾಧ್ಯವಿಲ್ಲ? ಕೆಲವು ಅವಿವಾಹಿತರೂ ಸಂತೋಷದಿಂದ ಇರುವುದಿಲ್ಲ ಹಾಗೆಯೇ ಅನೇಕ ವಿವಾಹಿತರಲ್ಲಿ ಸಂತೋಷದಿಂದ ಇರುವ ಜನರಿದ್ದಾರೆ.
ಸಂತೋಷವು ಪೂರ್ಣ ನಿಮ್ಮ ಆಯ್ಕೆಗೆ ಬಿಟ್ಟಿದ್ದು. ಅದು ನಿಮ್ಮ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ಉದ್ಯೋಗವಿಲ್ಲದ ಜನ ಕೂಡ ಸಂತೋಷವಾಗಿದ್ದಾರೆ. ಕೆಲವು ಉದ್ಯೋಗ ಹೊಂದಿರುವ ಜನರೂ ಅತೃಪ್ತರಾಗಿದ್ದಾರೆ. ಬುದ್ಧಿವಂತರಾಗಿರಿ ಮತ್ತು ಖುಶಿಯಾಗಿರಿ. ನೀವು ವಿವಾಹಿತರಾಗಿರೀ, ಅವಿವಾಹಿತರಾಗಿರೀ, ಉದ್ಯೋಗಿಗಳಾಗಿರೀ, ನಿರುದ್ಯೋಗಿಗಳಾಗಿರೀ, ನೀವು ಏನನ್ನಾದರೂ ಮಾಡುತ್ತಿರಿ ಆದರೆ ನೀವು ಸಂತೋಷವಾಗಿರುವುದು ಬಹಳ ಮುಖ್ಯ.
ವೀಡಿಯೊ:

ಕಾಮೆಂಟ್‌ಗಳು